ದಿನಾಂಕ – 13-12-2022 ರಂದು ಹಾವೇರಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ “ಗಡಿ ಅಪರಾಧ ಸಭೆ” ಯಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ ಬಿ ರಿಷ್ಯಂತ್ ಐಪಿಎಸ್ ರವರು ಹಾಗೂ ಹಾವೇರಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಹನುಮಂತರಾಯ ರವರು ಭಾಗವಹಿಸಿದ್ದರು. ಸದರಿ ಸಭೆಯಲ್ಲಿ ಧಾರವಾಡ, ಕಾರವಾರ, ದಾವಣೆಗೆರೆ, ಬಳ್ಳಾರಿ, ಹಾಗೂ ಗದಗ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿ ಹಾಗೂ ಅಪರಾಧ ದಳದ ಸಿಬ್ಬಂದಿಗಳು ಪಾಲ್ಗೊಂಡಿದ್ದು, ಅವರೊಂದಿಗೆ ವಿವಿಧ ಪತ್ತೆಯಾಗದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಉಪಯುಕ್ತ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಯಿತು.