ಆಕಸ್ಮಿಕ ಫೈರಿಂಗ್‌ನಿಂದ ಗುಂಡು ತಗುಲಿ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಸೋಮವಾರ ಬೆಳಗ್ಗೆ ಅವಘಡ ಸಂಭವಿಸಿದೆ.

ಚೇತನ್ (28) ಸಾವನ್ನಪ್ಪಿದ ಪೊಲೀಸ್ ಕಾನ್‌ಸ್ಟೇಬಲ್. ಬೆಳಗ್ಗೆಯ ತರಬೇತಿ ಮುಗಿಸಿ ಆಯುಧ ಸ್ವಚ್ಛ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಫೈರಿಂಗ್ ಆಗಿ ಗುಂಡು ತಗುಲಿದೆ. ಘಟನೆ ಬಳಿಕ ತುರ್ತಾಗಿ ದಾವಣಗೆರೆಯ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಚೇತನ್ ಅವರನ್ನು ಸಾಗಿಸಲಾಯಿತು.
ಆದರೆ, ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿಯೇ ಚೇತನ್ ಸಾವನ್ನಪ್ಪಿದ್ದಾರೆ.

ಶ್ರೀ ರವಿ ಎಸ್ ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು, ಪೂರ್ವ ವಲಯ, ದಾವಣಗೆರೆ ರವರು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರಿಂದು ದಿನಾಂಕ-23-08-2021ರಂದು ಅಕಾಲಿಕ ಮರಣಕ್ಕೀಡಾದ ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್ಟೇಬಲ್ ಆದ ದಿ|| ಚೇತನ್ ಆರ್ ರವರ ಅಂತಿಮ ದರ್ಶನವನ್ನು ಪಡೆದು ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಸ್ವಗ್ರಾಮ ಚನ್ನಗಿರಿ ತಾ. ಮಲಹಾಳು ಗ್ರಾಮದಲ್ಲಿ ಗೌರವ ವಂದನೆ ಸಮರ್ಪಿಸಿದರು. ಇದೇ ವೇಳೆ ಮೃತರ ಕುಟಂಬಸ್ಥರಿಗೆ ಸಾಂತ್ವಾನ ಹೇಳಿ , ಧೈರ್ಯ ತುಂಬಿದರು. ಇಲಾಖೆಯು ಸದಾ ನಿಮ್ಮ ಜೊತೆಯಲ್ಲಿದ್ದು ಯಾವುದಕ್ಕೂ ಆತಂಕ ಪಡಬಾರದೆಂದು ಹೇಳಿದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹ ಪಾಲ್ಗೋಂಡಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
