ದಿನಾಂಕ: 27-04-2021 ರಂದು ಶ್ರೀ ನರಸಿಂಹ ವಿ. ತಾಮ್ರಧ್ಜಜ ಡಿವೈ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ದಾವಣಗೆರೆ ರವರ ನೇತೃತ್ವದಲ್ಲಿ ದಲ್ಲಿ ಹರಿಹರ ನಗರದ ಎಸ್.ಸಿ ಎಸ್ಸ್.ಟಿ ಕಾಲೋನಿಗಳಿಗೆ ಭೇಟಿ ನೀಡಿ ಅವರ ಕುಂದು ಕೊರತೆಗಳನ್ನು ವಿಚಾರಿಸಲಾಯಿತು. ನಂತರ ಹರಿಹರ ನಗರದಲ್ಲಿ \”ಮಾಸ್ಕ್ ಜಾಗೃತಿ ಅಭಿಯಾನ\” ಜಾಥಾವನ್ನು ಹಮ್ಮಿಕೊಂಡಿದ್ದು ನಗರದ ಎಂ.ಜಿ ಸರ್ಕಲ್, ಬೊಂಗಾಳೆ ಸರ್ಕಲ್, ಟೆಂಪಲ್ ರೋಡ್, ಶಿವಮೊಗ್ಗ ಸರ್ಕಲ್, ಹೀಗೆ ನಗರದ ಮುಂತಾದ ಬೀದಿಗಳಲ್ಲಿ ಜಾಥಾ ನಡೆಸಿ ಮಾಸ್ಕ್ ಧರಿಸದೆ ಇರುವ ಜನರಿಗೆ, ಮಕ್ಕಳಿಗೆ, ವಯಸ್ಸಾದವರಿಗೆ ಮಾಸ್ಕ್ ನೀಡಿ ಕರೋನ ಎರಡನೇ ಅಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಹಾಗೂ ಅಗತ್ಯ ವಸ್ತುಗಳ ಪೂರೈಸುವ ಅಂಗಡಿ ಮುಗ್ಗಟ್ಟು ಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿ ಮುಗ್ಗಟ್ಟಿನ ಮಾಲೀಕರಿಗೆ ಕಾನೂನು ತಿಳುವಳಿಕೆ ನೀಡಿ ಮುಚ್ಚಿಸಲಾಯಿತು. ಪೊಲೀಸ್ ಅಧಿಕಾರಿಗಳಾದ ಶ್ರೀ ಸತೀಶ್ ಕುಮಾರ್ ಸಿ.ಪಿ.ಐ ಹರಿಹರ ವೃತ್ತ, ಪಿ.ಎಸ್.ಐ ರವರುಗಳಾದ ಶ್ರೀ ರವಿಕುಮಾರ್, ಶ್ರೀ ಸುನೀಲ್ ಕುಮಾರ್ ತೇಲಿ, ಶ್ರೀಮತಿ ಲತಾ ವಿ. ತಾಳೇಕರ್ ಹಾಗೂ ಹರಿಹರ ನಗರ ಪೊಲೀಸ್ ಠಾಣೆ ಮತ್ತು ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯವರು ಸಹ ಭಾಗಿಯಾಗಿದ್ದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್