ದಿನಾಂಕ 02-08-2023 ರಂದು ದಾವಣಗೆರೆ ಗ್ರಾಮಾಂತರ ಉಪ-ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 01-01-2022 ರಿಂದ 30-06-2023 ರವರೆಗೆ ವರದಿಯಾಗಿ ಪತ್ತೆಯಾಗಿರುವ ಸ್ವತ್ತು ಕಳವು ಪ್ರಕರಣಗಳಲ್ಲಿ ಕಳುವಾಗಿದ್ದ ಮಾಲನ್ನು ಪತ್ತೆ ಮಾಡಿ ಅಮಾನತ್ತುಪಡಿಸಿಕೊಂಡಿದ್ದು, ಈ ಸಂಬಂಧವಾಗಿ ದಿನಾಂಕ: 02-08-2023 ರಂದು ದಾವಣಗೆರೆ ನಗರದ ಡಿ.ಎ.ಆರ್ ಕವಾಯಿತು ಮೈದಾನದಲ್ಲಿ ಸದರಿ ಪತ್ತೆಯಾದ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಮಾಲುಗಳನ್ನು, ಅವುಗಳ ವಾರಸುದಾರರಿಗೆ ಹಿಂದಿರುಗಿಸುವ ಸಂಬಂಧವಾಗಿ “ಪ್ರಾಪರ್ಟಿ ರಿಟರ್ನ್ ಪೆರೇಡ್ ನ್ನು ಹಮ್ಮಿಕೊಂಡಿದ್ದು, ಸದರಿ ಪಾಪರ್ಟಿ ಪೆರೇಡ್ ಅನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್ ಬಿ ಬಸರಗಿ ರವರ ಉಪಸ್ಥಿತಿಯಲ್ಲಿ, ಶ್ರೀ ಬಿ.ಎಸ್. ಬಸವರಾಜ್ ಪೊಲೀಸ್ ಉಪಾಧೀಕ್ಷಕರು ಗ್ರಾಮಾಂತರ ಉಪ-ವಿಭಾಗ ರವರ ನೇತೃತ್ವದಲ್ಲಿ, ಶ್ರೀ ಲಿಂಗನಗೌಡ ನೆಗಳೂರ್ ಪಿ.ಐ ದಾವಣಗೆರೆ (ಗ್ರಾ), ಶ್ರೀ ನಾಗರಾಜ್ ಸಿ.ಪಿ.ಐ ಮಾಯಾಕೊಂಡ ವೃತ್ತ, ಶ್ರೀ ಸತೀಶ್ ಸಿ.ಪಿ.ಐ ಹರಿಹರ ವೃತ್ತ, ಶ್ರೀ ದೇವಾನಂದ ಪಿ.ಐ, ಹರಿಹರ ನಗರ, ಶ್ರೀನಿವಾಸ್ ಪಿ.ಐ ಜಗಳೂರು, ಶ್ರೀ ಸೋಮಶೇಖರ್ ಕೆಂಚಾರೆಡ್ಡಿ, ಪಿ.ಐ ಬಿಳಿಚೋಡು ಠಾಣೆ ಮತ್ತು ಉಪ-ವಿಭಾಗದ ಎಲ್ಲಾ ಪಿ.ಎಸ್.ಐ ರವರುಗಳು ಹಾಗೂ ಉಪ-ವಿಭಾಗದ ಅಪರಾಧ ವಿಭಾಗದ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.
ಈ ಪ್ರಾಪರ್ಟಿ ಪರೇಡ್‌ನಲ್ಲಿ ಜಪ್ತು ಪಡಿಸಿಕೊಂಡಿರುವ 134 ಪ್ರಕರಣಗಳಲ್ಲಿ 1713.682 ಗ್ರಾಂ ಬಂಗಾರ,2737.9 ಗ್ರಾಂ ಬೆಳ್ಳಿ ಆಭರಣಗಳು, 16 ಮೋಟರ್ ಬೈಕ್‌ಗಳು, ಟ್ರ್ಯಾಕ್ಟರ್ & ಬಿಡಿ ಭಾಗಗಳು, 178 ಕೆಜಿ ಅಡಿಕೆ, 03 ಮೊಬೈಲ್, ಒಟ್ಟು 2,31,650 ನಗದು ಹಣ ಮತ್ತು ಕೃಷಿ ಉಪಕರಣಗಳು ಸೇರಿ ಒಟ್ಟು 1,68,96,744 ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.