ಕರ್ನಾಟಕ ರಾಜ್ಯ ಪೊಲೀಸ್ ದ್ವಜ ಹಾಗೂ ಕಲ್ಯಾಣ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ವತಿಯಿಂದ ದಿನಾಂಕ 02.04.2022 ರಂದು ಮಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಪಥಸಂಚಲನ ನಡೆಯಿತು.

ನಿವೃತ್ತ ಪೊಲೀಸ್ ಅಧೀಕ್ಷಕರಾದ ಶ್ರೀ .ವಿನಯ್ ಎ ಗಾಂವಕರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಾದ ಶ್ರೀ. ದೇವಜ್ಯೋತಿ ರೇ ಐ.ಪಿ.ಎಸ್ ರವರು ವಹಿಸಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಐ.ಪಿ.ಎಸ್ , ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೋನಾವಣೆ ಋಷಿಕೇಶ್ ಭಗವಾನ್ ಐ.ಪಿ.ಎಸ್, ಕೆ.ಎಸ್.ಆರ್.ಪಿ 7ನೇ ಪಡೆಯ ಕಮಾಂಡೆಂಟ್ ಬಿ.ಎಂ ಪ್ರಸಾದ್ ಹಾಗೂ ಜಿಲ್ಲೆಯ ಇತರೆ ಅಧಿಕಾರಿ/ಸಿಬ್ಬಂದಿಗಳು ಹಾಜರಿರುತ್ತಾರೆ. ಈ ಸಂದರ್ಭ ನಡೆದ ಪೊಲೀಸ್ ಪಥಸಂಚಲನದ ನೇತೃತ್ವವನ್ನು ದಕ್ಷಿಣ ಕನ್ನಡ ಜಿಲ್ಲಾ ಮೀಸಲು ಪೊಲೀಸ್ ಪಡೆ ಆರ್.ಪಿ.ಐ ನಾರಾಯಣ ಪೂಜಾರಿ ಯವರು ವಹಿಸಿರುತ್ತಾರೆ.