ಶಾಲಾ-ಕಾಲೇಜ್ ಗಳ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಋಷಿಕೇಶ್ ಭಗವಾನ್ ಸೋನವಣೆ ಐ.ಪಿ.ಎಸ್ ರವರು ದಿನಾಂಕ 29.01.2022 ರಂದು ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿಗೆ ಅಧಿಕಾರಿಗಳು ಹಾಗೂ ಇತರ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಭೇಟಿ ನೀಡಿ ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ERSS-112 ತುರ್ತು ಸೇವೆಗಳು, ಬಾಲಾಪರಾಧ, ಪೊಕ್ಸೋ ಪ್ರಕರಣ, ಬಾಲಾಪರಾಧಿ ನ್ಯಾಯಾಲಯ, ಸೈಬರ್ ಅಪರಾಧಗಳು ಸೇರಿದಂತೆ ಕಾನೂನಿನ ಹಲವು ವಿಷಯಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ಇದರೊಂದಿಗೆ ಮಾದಕವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾರ್ಗದರ್ಶನ ನೀಡಿ, ಅಂತಹ ದುಷ್ಚಟಗಳಿಗೆ ಒಳಗಾಗದಂತೆ E-Pledge ಆನ್ ಲೈನ್ ಅಭಿಯಾನದಲ್ಲಿ ಪ್ರತಿಜ್ಙೆ ಸ್ವೀಕರಿಸುವಂತೆ ತಿಳಿಸಿದರು.