ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಸರಘಟ್ಟ, ದಾಸೇನಹಳ್ಳಿ ಕ್ರಾಸ್‌ನ ದುರುದಾರರು ದಿನಾಂಕ 16/07/2023 ರಿಂದ ದಿನಾಂಕ 17/09/2023 ರ ನಡುವೆ ತಮ್ಮ ಸ್ವಂತ ಊರಿಗೆ ಹೋಗಿ, ವಾಪಸ್ಸು ಒಂದು ನೋಡಲಾಗಿ, ತಮ್ಮ ಮನೆಯ ಡೋರ್‌ಲಾಕ್ ಬೀಗ ಮುರಿದು ಯಾರೋ ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ತನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಅವರುಗಳು
ನೀಡಿದ ಮಾಹಿತಿ ಮೇರೆಗೆ ಸುಮಾರು 10.3 ಲಕ್ಷ ರೂ. ಬೆಲೆ ಬಾಳುವ 124.5 ಗ್ರಾಂ ಚಿನ್ನಾಭರಣ, 3.192 ಕೆ.ಜಿ.
ಬೆಳ್ಳಿ ವಸ್ತುಗಳು, ನಗದು ಹಣ 2,020/- ರೂ ಹಾಗೂ ಕೃತ್ಯಕ್ಕೆ ಬಳಸಿದ್ದ ಆಕ್ಟಿವಾ ಬೈಕ್, ಒಂದು ಕಬ್ಬಿಣದ ರಾಡ್,
ಒಂದು ನ್ಯೂ ಡ್ರೈವರ್‌ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಮೂಲತಃ ನೇಪಾಳ ದೇಶದವರಾಗಿದ್ದು, ಎ1) ಆರೋಪಿಯು ಕೆಲವು ವರ್ಷಗಳ ಹಿಂದೆ ಮುಂಬೈಗೆ ಬಂದು ಹೋಟೆಲ್ ಕೆಲಸ ಮಾಡಿ ಕೊಂಡಿದ್ದು, ನಂತರ ಈತನು ಮುಂಬೈನಲ್ಲಿ 5 ಕನ್ನಾ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ. ನಂತರ ಎ2) ಆರೋಪಿಯನ್ನು ಸಂಪರ್ಕಿಸಿ ಆತನ ಸಹಾಯದಿಂದ ಬೆಂಗಳೂರಿಗೆ ಬಂದು ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು, 2023 ನೇ ಸಾಲಿನಲ್ಲಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುತ್ತಾನೆ. ಎ?) ಆರೋಪಿಯು 45 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುತ್ತಾನೆ. ಇಬ್ಬರು ಆರೋಪಿಗಳು ಸುಲಭವಾಗಿ ಹಣ ಸಂಪಾದನೆ ಮಾಡಿ, ದುಶ್ಚಟಗಳಿಗೆ ಹಣ ಹೊಂದಿಸಲು ಇಂತಹ ಕೃತ್ಯವೆಸಗಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಗಳ ಬಂಧನದಿಂದ ಪೀಣ್ಯ ಪೊಲೀಸ್ ಠಾಣೆಯ ಪ್ರಕರಣ, ಸೋಲದೇವನಹಳ್ಳಿ ಪೊಲೀಸ್
ಠಾಣೆಯ 5 ಹಗಲು ಮತ್ತು ರಾತ್ರಿ ಕನ್ನಾ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 6 ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಉತ್ತರ ವಿಭಾಗ ಡಿಸಿಪಿ , ಸೈದಲು ಆಡಾವತ್, ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಮೇರಿ ಶೈಲಜ, ಎ.ಸಿ.ಪಿ. ಯಶವಂತರ ಉಪವಿಭಾಗ ರವರ ನೇತೃತ್ವದಲ್ಲಿ, ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ, ಹರಿಯಪ್ಪ ಹೆಚ್ ಮತ್ತು ಸಿಬ್ಬಂದಿಯವರುಗಳು
ಆರೋಪಿಗಳನ್ನು ದಸ್ತಗಿರಿ ಮಾಡಿ, ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.