ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪಿರಿಯಾದುದಾರರು ಡಾಲರ್ ಕಾಲೋನಿಯ ತಮ್ಮ ಮನೆಯಲ್ಲಿ ದಿ:29/07/2023 ರಂದು ಮನೆಯ ಮುಂಬಾಗಿಲ ಡೋರ್‌ಲಾಕ್ ಬೀಗ ಮುರಿದು ಚಿನ್ನ ಮತ್ತು ವಜ್ರದ ಒಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯಕೈಗೊಂಡ ಪೊಲೀಸರು ಕೃತ್ಯ ನಡೆದ ಸ್ಥಳದ ಸಮೀಪದ ಹಲವಾರು ಸಿಸಿ
ಟಿವಿಗಳನ್ನು ಪರಿಶೀಲಿಸಿ, ಆರೋಪಿಗಳ ಚಲನವಲನದ ಮಾಹಿತಿಯನ್ನು ಸಂಗ್ರಹಿಸಿ, ದಿ:31/07/2023 ರಂದು
ಕನ್ಯಾಕುಮಾರಿ-ಆಗ್ರಾ ಹೈ ವೇಯಲ್ಲಿರುವ ಶಾಹಿನ್ ಟೋಲ್ ಬಳಿ 03 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ,
ಅವರು ನೀಡಿದ ಸುಳಿವಿನ ಮೇರೆಗೆ, ಮತ್ತೊಬ್ಬ ಪ್ರಮುಖ ಆರೋಪಿಯನ್ನು ಪಶ್ಚಿಮ ದೆಹಲಿಯ, ತಿಲಕನಗರದ
ಬಳಿ ವಶಕ್ಕೆ ಪಡೆಯಲಾಗಿರುತ್ತೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿ ಆರೋಪಿತರು ಕಳವು ಮಾಡಲೆಂದೇ ದಿ:24,7/2023 ರಂದು ದೆಹಲಿಯಿಂದ ಬೆಂಗಳೂರಿಗೆ ಬಂದು, ಒಂದು ಆಕ್ಟಿವಾ ಬೈಕ್ ವೊಂದನ್ನು ಖರೀದಿಸಿ, ಬೀಗ ಹಾಕಿರುವ ಮನೆಯನ್ನು ಗುರುತಿಸಿಕೊಂಡು, ದಿ:28/07/2023 ರಂದು ಡಾಲರ್್ರ ಕಾಲೋನಿಯ ಮನೆಯ ಡೋರ್‌ಲಾಕ್‌ನ್ನು ಮುರಿದು ಮನೆಯಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ ಮೇರೆಗೆ, ಆರೋಪಿತರಿಂದ ಒಟ್ಟು 78 ಲಕ್ಷದ 65 ಸಾವಿರ ರೂ. ಮೌಲ್ಯದ 1 ಕೆ.ಜಿ, 430 ಗ್ರಾಂ ತೂಕದ ಚಿನ್ನ ಮತ್ತು ವಜ್ರದ ಒಡವೆಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಆಕ್ಟಿವಾ ಬೈಕ್, ಒಂದು ಸ್ಕ್ರೂ ಡ್ರೈವರ್‌ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಕೇಸಿನ ತನಿಖೆಯಿಂದ ಆರೋಪಿತರ ಮೇಲೆ ದೆಹಲಿ ಸೇರಿದಂತೆ, ದೆಹಲಿಯ ಮಂಗಲ್ ಪುರಿ ಮತ್ತು
ಪ್ರೀತ್ ಬಿಹಾರ್ ಪೊಲೀಸ್ ಠಾಣೆ ಮತ್ತು ಕೇರಳಾ ರಾಜ್ಯದ ಎರ್ನಾಕುಲಂ ಪೊಲೀಸ್ ಠಾಣೆ, ಹಾಗೂ
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಕಳವು ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿರುತ್ತೆ.
ಈ ಕೇಸಿನ ಪತ್ತೆ ಕಾರ್ಯವನ್ನು ಉತ್ತರ ವಿಭಾಗ ಡಿಸಿಪಿ ಸಾಹೇಬರವರಾದ ಶ್ರೀ. ಶಿವಪ್ರಕಾಶ್ ದೇವರಾಜ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಶ್ರೀ. ಮನೋಜ್‌ಕುಮಾರ್, ಎ.ಸಿ.ಪಿ. ಜೆ.ಸಿ.ನಗರ ಉಪವಿಭಾಗ ರವರ ನೇತೃತ್ವದಲ್ಲಿ, ಸಂಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ. ಗುರುಪ್ರಸಾದ್, ಎ. ಮತ್ತು ಸಿಬ್ಬಂದಿಯವರುಗಳು ಆರೋಪಿತರನ್ನು ದಸ್ತಗಿರಿ ಮಾಡಿ, ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ.ಬಿ.ದಯಾನಂದ ರವರು ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ. ಎನ್.ಸತೀಶ್ ಕುಮಾರ್ ರವರು ಶ್ಲಾಘಿಸಿರುತ್ತಾರೆ.
ವರದಿ : ಆಂಟೋನಿ ಬೇಗೂರು