ಚಿತ್ರದುರ್ಗ ಜಿಲ್ಲೆಯಿಂದ ಕೋಲಾರಕ್ಕೆ ಬೊಲೆರೋ ಪಿಕಪ್ ವಾಹನದಲ್ಲಿ ಟೊಮೊಟೋ ಲೋಡನ್ನು ದಿನಾಂಕ 08-07-2023 ರಂದು ತೆಗೆದುಕೊಂಡು ಹೋಗುವಾಗ ರಾತ್ರಿ 10-15 ಗಂಟೆ ಸಮಯದಲ್ಲಿ ಬೆಂಗಳೂರು ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣಾ ಸರಹದ್ದಿನ ತುಮಕೂರು ರಸ್ತೆ, ಸಿ.ಎಂ.ಟಿ.ಐನಿಂದ ಹೆಬ್ಬಾಳ ಕಡೆ ಹೋಗುತ್ತಿರುವಾಗ, ಸದರಿ ವಾಹನದ ಪಕ್ಕದಲ್ಲಿ ಹೋಗುತ್ತಿದ್ದ 4-5 ಜನರಿಂದ ಮಹೀಂದ್ರ XIV 5000 ವಾಹನವು ಸದರಿ ವಾಹನಕ್ಕೆ ತಗುಲಿಸಿ, ಗಲಾಟೆ ಮಾಡಿಕೊಂಡು ವಿದ್ಯಾದಿ ಮತ್ತು ಅವರ ವಾಹನದ ಚಾಲಕನನ್ನು ಹೆದರಿಸಿ ವಾಹನ ಸಮೇತ ಅಪಹರಿಸಿಕೊಂಡು ಹೋಗಿ ಮಾರ್ಗ ಮಧ್ಯದಲ್ಲಿ ವಾಹನದಿಂದ ಕೆಳಗಿಳಿಸಿ ಹಣ ಕೊಡುವಂತೆ ಹೆದರಿಸಿ ಟೋಟೋ ತುಂಬಿದ ವಾಹನ ಮತ್ತು ತಮ್ಮ ಮೊಬೈಲ್ ಫೋನ್‌ಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯಲ್ಲಿ ಅಪಹರಣ, ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಒಂದು ವಿಶೇಷ ತಂಡ ರಚಿಸಿದ್ದು,
ಸದರಿ ತಂಡವು ತಮಿಳುನಾಡಿನಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ, ಸುಲಿಗೆ ಮಾಡಿದ್ದ ಬೊಲೆರೋ ಏಕಪ್ ವಾಹನ ಮತ್ತು ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಿಸಿದ ಮಹೇಂದ್ರ XIV 50M) ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಬೆಂಗಳೂರು ನಗರ, ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಶಿವ ಪ್ರಕಾಶ್ ದೇವರಾಜು,
ರವರ ಮಾರ್ಗದರ್ಶನದಲ್ಲಿ, ಶ್ರೀ ಸದಾನಂದ ಎ ತಿಪ್ಪಣ್ಣವರ್ ಎಸಿಪಿ ಪೀಣ್ಯ ಉಪ ವಿಭಾಗ ಮತ್ತು ಶ್ರೀ ಸುರೇಶ್.ಬಿ. ಪೊಲೀಸ್ ಇನ್ಸ್ಪೆಕ್ಟರ್, ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ ರವರ ನೇತೃತ್ವದ ತಂಡ ಆರೋಪಿಯನ್ನುದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ.ಬಿ.ದಯಾನಂದ ರವರು ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ. ಎನ್.ಸತೀಶ್ ಕುಮಾರ್ ರವರು ಶ್ಲಾಘಿಸಿರುತ್ತಾರೆ.