19 ಲಕ್ಷ ಮೌಲ್ಯದ 109.8 ಗ್ರಾಂ ಚಿನ್ನದ ಸರ ಮತ್ತು 03 ದ್ವಿ-ಚಕ್ರ ವಾಹನ ವಶ.
ಜೆ.ಪಿ.ನಗರ ಪೊಲೀಸ್ ಠಾಣಾ ಸರಹದ್ದಿನ ಮಾರೇನಹಳ್ಳಿಯಲ್ಲಿ ವಾಸವಿರುವ ಫಿರಾದುದಾರರು ದಿನಾಂಕ:22/08/2024 ರಂದು ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ದಿನಾಂಕ:14/08/2024 ರಂದು ರಾತ್ರಿ 9 ಗಂಟೆಯಿಂದ ರಾತ್ರಿ 9-15 ರ ಗಂಟೆಯ ಮಧ್ಯದ ಸಮಯದಲ್ಲಿ ಫಿರಾದಿಯವರು ಮನೆಯ ಕಿಟಕಿಯ ಬಾಗಿಲನ್ನು ತೆರೆದು, ಕಿಟಕಿಯ ಪಕ್ಕದಲ್ಲಿ ಮಲಗಿರುತ್ತಾರೆ. ಆ ಸಮಯದಲ್ಲಿ ಅಪರಿಚಿತ ಓರ್ವ ವ್ಯಕ್ತಿಯು ಫಿರಾದುದಾರರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಕಿಟಕಿಯ ಮೂಲಕ ಕೈ ಹಾಕಿರುತ್ತಾನೆ. ಫಿರಾದುದಾರರು ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಬಿಗಿಯಾಗಿ ಹಿಡಿದುಕೊಂಡಿರುತ್ತಾರೆ. ಅಪರಿಚಿತ ವ್ಯಕ್ತಿಯು ಬಲವಾಗಿ ಚಿನ್ನದ ಮಾಂಗಲ್ಯ ಸರವನ್ನು ಎಳೆದಿದ್ದು, ಅರ್ಧದಷ್ಟು ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುತ್ತಾನೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:24/08/2024 ರಂದು ಜಯದೇವ ಆಸ್ಪತ್ರೆಯ ಬಳಿ ಓರ್ವ ವ್ಯಕ್ತಿಯನ್ನು ಒಂದು ದ್ವಿ-ಚಕ್ರ ವಾಹನ ಹಾಗೂ ಆತನ ವಶದಲ್ಲಿದ್ದ 60 ಗ್ರಾಂ ಚಿನ್ನದ ಚೈನ್ ಸಮೇತ ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ 60 ಗ್ರಾಂ ಚಿನ್ನದ ಚೈನ್‌ನ್ನು ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗ್ಗೆ ಒಂದು ತಿಂಗಳ ಹಿಂದೆ ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ. ಅಲ್ಲದೆ ಈ ಪ್ರಕರಣದಲ್ಲಿಯೂ ಸಹ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ ಹಾಗೂ ದ್ವಿ-ಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:24/08/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 7 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ವಶಕ್ಕೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ದಿನಾಂಕ:25/08/2024 ರಂದು ಆರೋಪಿಯು 29.8 ಗ್ರಾಂ ಚಿನ್ನದ ಚೆನ್‌ನ್ನು ಗೋಲ್ಡ್ ಪಾಲಿಷ್ ಮಾಡುವ ವ್ಯಕ್ತಿಗೆ ನೀಡಿದ್ದನ್ನು ವಶಪಡಿಸಿಕೊಳ್ಳಲಾಯಿತು,
ದಿನಾಂಕ:27/08/2024 ರಂದು ಆರೋಪಿಯ ಸ್ನೇಹಿತನಿಗೆ ನೀಡಿದ್ದ 20 ಗ್ರಾಂ ಚಿನ್ನದ ಚೈನ್ ನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:28/08/2024 ರಂದು ರಾಗಿ ಗುಡ್ಡದ ಮೆಟ್ರೋ ನಿಲ್ದಾಣದ ಪಾರ್ಕಿಂಗ್‌ನಿಂದ 2 ದ್ವಿ-ಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಯಿಂದ ಒಟ್ಟಾರೆಯಾಗಿ 109.8 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು 3 ದ್ವಿ- ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಇವುಗಳ ಒಟ್ಟು ಮೌಲ್ಯ 9,00,000/- (ಒಂಬತ್ತು ಲಕ್ಷ ರೂಪಾಯಿ). ದಿನಾಂಕ:30/08/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ.ಲೊಕೇಶ್ ಭರಮಪ್ಪ ಜಗಲಾಸರ್ ಐ.ಪಿ.ಎಸ್ ರವರ
ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ನಾರಾಯಣಸ್ವಾಮಿ.ಮಿ ರವರ ನೇತೃತ್ವದಲ್ಲಿ, ಜೆ.ಪಿ.ನಗರ ಪೊಲೀಸ್ ಈಕೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ಟಿ.ಎಸ್.ರಾಧಾಕೃಷ್ಣ ಮತ್ತು ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.