ಇಂದು ಚಿತ್ರದುರ್ಗ ಉಪವಿಭಾಗದ ರೌಡಿ ಶೀಟರ್ ಗಳ ಪೇರೆಡ್ ನ್ನು ಚಿತ್ರದುರ್ಗ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ. ಪರಶುರಾಮ ಐಪಿಎಸ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪೇರೆಡ್ ನಲ್ಲಿ ಹಾಜರಾದ ರೌಡಿ ಆಸಾಮಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅನೈತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಂತೆ ಎಚ್ಚರಿಕೆ ಯನ್ನು ನೀಡಿದರು. ಹಾಗೇನಾದರು ಒಂದು ವೇಳೆ ನೀವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಲ್ಲಿ ಅಂತಹವರ ವಿರುದ್ಧ ಗೂಂಡಾ ಕಾಯ್ದೆ ಮತ್ತು ಗಡಿಪಾರು ಮಾಡಲು ಶಿಫಾರಸ್ಸು ಮಾಡುವಂತೆ ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕರಿಗೆ ತಿಳಿಸಿದರು. ಹಾಗೂ ವಯಸ್ಸಾಗಿದ್ದು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದೆ ಒಳ್ಳೆ ನಡೆತೆಯಿಂದ ಜೀವನ ಸಾಗಿಸುತ್ತಿರುವ ಆಸಾಮಿಗಳ ರೌಡಿ ಶೀಟ್ ಗಳನ್ನು ಮುಕ್ತಾಯ ಗೊಳಿಸಲು ಶಿಫಾರಸ್ಸು ಮಾಡಲು ತಿಳಿಸಿದರು. ಸದರಿ ಪೇರೆಡ್ ನಲ್ಲಿ ಶ್ರೀ ಎಸ್.ಜೆ ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕರಾದ ಪಾಂಡುರಂಗ .ಎಸ್ ರವರು ಮತ್ತು ಇತರೆ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.
