ಬೆಂಗಳೂರು ನಗರದ ಕೋರಮಂಗಲ ಪೊಲೀಸ್ ಠಾಣೆ ಸರಹದ್ದಿನ ಶರಬೀಶ್ ಎಂಟರ್ ಪ್ರೈಸಸ್ ಶಾಪ್ನಲ್ಲಿ ಸರ್ಕಾರದ ಯಾವುದೇ ಪ್ರಾಧಿಕಾರದ ಪರವಾನಗಿ ಪಡೆಯದೆ ಲಿಯೋ, ಎಂ.ವಿ.ಆರ್. ಜ್ಯೋತಿ, ಅಗ್ನಿ, ಸೂರ್ಯ ಗ್ಯಾಸ್ ಕಂಪನಿಯ ಸಿಲಿಂಡರ್ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿಕೊಂಡು ಇವುಗಳಿಂದ ರೀಫಿಲ್ಲಿಂಗ್ ರಾಡ್ಗಳ ಮೂಲಕ ಸಣ್ಣ ಸಣ್ಣ ಸಿಲಿಂಡರ್ಗಳಿಗೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡಿಕೊಂಡು ಮಾರಾಟ ಮಾಡಿ, ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿ ಮೋಸ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ, ದಿನಾಂಕ.11.12.2023 ರಂದು ಸದರಿ ಶಾಪ್ ಮೇಲೆ ದಾಳಿ ಮಾಡಿ, ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಆತನಿಂದ ಸುಮಾರು ₹ 14,00,000 ಲಕ್ಷ ಬೆಲೆಬಾಳುವ ವಿವಿಧ ಕಂಪನಿಯ ಒಟ್ಟು 135 ಸಿಲಿಂಡರ್ಗಳನ್ನು, 2 ರೀಫಿಲ್ಲಿಂಗ್ ರಾಡ್ಗಳು, ಒಂದು ತೂಕದ ಯಂತ್ರ ಮತ್ತು ಒಂದು ಈಚರ್ ವಾಹನವನ್ನು ವಶಕ್ಕೆ ಪಡಿಸಿಕೊಂಡಿರುತ್ತಾರೆ.
ಈ ಸಂಬಂಧ ಆರೋಪಿಗಳ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ/ಸಿಬ್ಬಂದಿಯವರುಗಳು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.