ಬೆಂಗಳೂರು ನಗರದಲ್ಲಿ ಹೆಲ್ಮೆಟ್ ರಹಿತ ಚಾಲನೆ ಪ್ರಾಣಾಂತಿಕ ಸಮಸ್ಯೆಯಾಗಿದೆ. ಕೆಲವರು ಹೆಲ್ಮೆಟ್ ನ್ನು ನೆಪಮಾತ್ರಕ್ಕೆ ಧರಿಸುವ ಚಾಳಿ ಬೆಳೆಸಿಕೊಂಡು ಪ್ರಾಣಾಪಾಯಕ್ಕೆ ತುತ್ತಾಗುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಹಾಫ್ ಹೆಲ್ಮೆಟ್ ಧರಿಸಿ ಪ್ರಾಣಾಪಾಯಕ್ಕೊಳಗಾಗುವವರ ಸಂಖ್ಯೆಯೂ ಅಧಿಕವಿದೆ. ಹೆಲ್ಮೆಟ್ ಧರಿಸಿದಾಗ ಗಲ್ಲಪಟ್ಟಿಯನ್ನು (chin strap) ಹಾಕದೆ ಅಪಾಯಕ್ಕೊಳಗಾಗುವವರ ಸಂಖ್ಯೆಯೂ ಬಹಳಷ್ಟಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು \’ಗುಣಮಟ್ಟದ ಹೆಲ್ಮೆಟ್ ಧರಿಸೋಣ ಪ್ರಾಣ ಉಳಿಸೋಣ\’ – ಅಭಿಯಾನಕ್ಕೆ ಚಾಲನೆ ನೀಡಲು ನಿರ್ಧರಿಸಿ ಕಾರ್ಯೋನ್ಮುಖರಾಗಿದ್ದೇವೆ.ನಮಗೆ ಒಂದು ಕನಸಿತ್ತು.
ಶ್ರೀ .ಪುನೀತ್ ರಾಜ್ ಕುಮಾರ್ ರವರನ್ನು \’ರಸ್ತೆ ಸುರಕ್ಷತೆ\’ ಯ ರಾಯಭಾರಿಯನ್ನಾಗಿ ಮಾಡಿಕೊಳ್ಳಬೇಕೆಂದು, ಆ ಮೂಲಕ ರಸ್ತೆ ಸುರಕ್ಷತೆಯ ಸಂದೇಶ ಹರಡಬೇಕೆಂದು. ಆದರೆ ವಿಧಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.
ಈ ಅಭಿಯಾನವನ್ನು ಅವರ ನೆನಪಿಗೆ ಸಮರ್ಪಿಸುತಿದ್ದೇವೆ. ಈ ದಿನ ಸಂಚಾರ ನಿರ್ವಹಣಾ ಕೇಂದ್ರ ಅವರದಲ್ಲಿ ಈ ಅಭಿಯಾನವನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಒಂದು ಜಾಗೃತಿ ವಿಡಿಯೋವನ್ನು ಲೋಕಾರ್ಪಣೆ ಮಾಡಿ,ಕೆಲವು ಸಾರ್ವಜನಿಕರಿಗೆ ಸಾಂಕೇತಿಕವಾಗಿ ಗುಣಮಟ್ಟದ ಹೆಲ್ಮೆಟ್ ವಿತರಿಸುವ ಮೂಲಕ ಉದ್ಘಾಟನೆಯನ್ನು ಮಾಡಿದರು.
ಅಧ್ಯಕ್ಷತೆಯನ್ನು ಬೆಂಗಳೂರು ನಗರ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ .ಕಮಲ್ ಪಂತ್ ಐಪಿಎಸ್ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾನ್ಯ ಜಂಟಿ ಪೊಲೀಸ್ ಆಯುಕ್ತರಾದ ಡಾ ।ಬಿ ಆರ್ ರವಿಕಾಂತೇ ಗೌಡ ಐಪಿಎಸ್ ಬೆಂಗಳೂರು ನಗರ ಸಂಚಾರ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.