ಗೋಕರ್ಣ ಪೊಲೀಸ್ ಠಾಣಾ ಗುನ್ನಾ ನಂ 93/2022 ಕಲಂ 8(ಸಿ), 20(ಬಿ) (ii) (A) NDPS ACT 1989
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಾಂಜಾ ಸಾಗಾಟ/ಮಾರಾಟ ಪ್ರಕರಣದ ಬಗ್ಗೆ ಪತ್ತೆಗಾಗಿ ಮಾನ್ಯ ಶ್ರೀಮತಿ ಸುಮನ್ ಡಿ ಪೆನ್ನೇಕರ, ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಕಾರವಾರ, ಮಾನ್ಯ ಹೆಚ್ಚುವರಿ ಪೊಲಿಸ್ ಅಧೀಕ್ಷಕರಾದ ಮಾನ್ಯ ಶ್ರೀ ಬದ್ರಿನಾಥ್, ಭಟ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಾನ್ಯ ಶ್ರೀ ಬೆಳ್ಳಿಯಪ್ಪ ಕೆ.ಯು ರವರುಗಳ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯ ಮೇರೆಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಬೇಲೆಹಿತ್ತಲ ಗ್ರಾಮದ ಮೇನ್ ಬೀಚ್-ಬೇಲೆಹಿತ್ತಲ ಬೀಚ್ ರಸ್ತೆಯ ಮೇಲೆ ಈ ದಿವಸ ದಿನಾಂಕ 27-09-2022 ರಂದು 18-00 ಗಂಟೆಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಗಾಂಜಾ ಮರಾಟ ಮಾಡುತ್ತಿರುವಾಗ ಸುಮಾರು 10,000/- ರೂ ಮೌಲ್ಯದ 502 ಗ್ರಾಂ ತೂಕದ ಗಾಂಜಾ ಮಾದಕ ಪದಾರ್ಥವನ್ನು ಶ್ರೀ ವಸಂತ್ ಆಚಾರ್, ಪೊಲೀಸ್ ನಿರೀಕ್ಷಕರು, ಗೋಕರ್ಣ ಪೊಲೀಸ್ ಠಾಣೆ ರವರ ನೇತೃತ್ವದ ತಂಡ ದಾಳಿ ಮಾಡಿ ಆರೋಪಿತನಾದ 1) ಉಮೇಶ ತಂದೆ ಹೊಸಬು ಗೌಡ, ಪ್ರಾಯ:-45 ವರ್ಷ, ವೃತ್ತಿ- ಕೂಲಿಕೆಲಸ ಸಾ|| ಬಿಜ್ಜೂರು, ತಾ|| ಕುಮಟಾ 2) ತುಳಸು ತಂದೆ ಹಮ್ಮು ಗೌಡ, ಪ್ರಾಯ-47 ವರ್ಷ, ವೃತ್ತಿ- ಕೂಲಿಕೆಲಸ ಸಾ|| ಬೇಲೆಹಿತ್ತಲ ತಾ|| ಕುಮಟಾ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಶ್ರೀ ರವೀಂದ್ರ ಬಿರಾದಾರ, ಪಿ.ಎಸ್.ಐ ಸುಧಾ ಅಘನಾಶಿನಿ, ಪ್ರೊ. ಪಿ.ಎಸ್.ಐ ಕೋಕಿಲಾ, ಎ.ಎಸ್.ಐ ಅರವಿಂದ್ ಶೆಟ್ಟಿ ಹಾಗೂ ಪೊಲೀಸ್ ಸಿಬ್ಬಂದಿಯವರಾದ ನಾಗರಾಜ ಪಟಗಾರ, ವಸಂತ್ ನಾಯ್ಕ, ನಾಗರಾಜ ನಾಯ್ಕ, ರಾಜೇಶ ಹೆಚ್ ನಾಯ್ಕ, ಸಚಿನ್ ನಾಯ್ಕ, ಜಿ.ಬಿ ರಾಣೆ, ಮಂಜುನಾಥ ಉಪ್ಪಾರ, ಅರುಣ್ ಮುಕ್ಕಣ್ಣವರ, ರಾಮಯ್ಯ ನಾಯ್ಕ, ಗಣೇಶ ದಾಸರ ರವರು ಭಾಗವಹಿಸಿದ್ದರು.