ಗದಗ ಅರಣ್ಯ ಪೊಲೀಸ್ : ಗದಗ ಮೃಗಾಲಯದಲ್ಲಿ ಮಕ್ಕಳ ಬೇಸಿಗೆ ಶಿಬಿರದ 3ನೇ ದಿನ ಸಾಹಸಮಯವಾಗಿತ್ತು! ಹಾವುಗಳ ಬಗ್ಗೆ , ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪ್ರಾಮುಖ್ಯತೆ ಮತ್ತು ಹಾವು ಕಚ್ಚಿದರೆ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕೆಂದು ಮಕ್ಕಳಿಗೆ ತಿಳಿಸಲಾಯಿತು.
ಗದಗದಲ್ಲಿ ಕಂಡುಬರುವ ಕೆಲವು ಸಾಮಾನ್ಯ ಚಿಟ್ಟೆಗಳು ಮತ್ತು ಅವುಗಳನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ನಾವು ಚರ್ಚೆ ಮಾಡಿದೆವು ಹಾಗೂ
ಕಪ್ಪತ್ತ ಗುಡ್ಡ ವನ್ಯಜೀವಿಧಾಮದ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಬಗ್ಗೆಯೂ ಚರ್ಚೆ ಮಾಡಲಾಯಿತು. ಇದು ಕಲಿಯಲು ಮತ್ತು ಅನ್ವೇಷಿಸಲು ಉತ್ತಮ ದಿನವಾಗಿತ್ತು!