ಗಣಪತಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೌಹಾರ್ದ ಸಭೆ
ಯಾದಗಿರಿ..ಸುರಪುರ ತಾಲೂಕ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಮತ್ತು ಗಣೇಶ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಶಾಂತಿ ಸಭೆ .
ಸಭೆಯಲ್ಲಿ ಅಧ್ಯಕ್ಷತೆ ವಹಿಸಿಕೊಂಡಿರುವ DYSP ಜಾವೀದ್ ಇನಾಮದಾರ ಅವರು ಮಾತನಾಡಿ ಕೆಂಭಾವಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ನಿಯಮನುಸಾರ ಕಡ್ಡಾಯವಾಗಿ ಬಾಂಡ್ ಬರೆದು ಕೊಡಬೇಕು ಎಂದು ಹೇಳಿದರು.

ಮೆರವಣಿಗೆಯಲ್ಲಿ ಡಿಜೆಗಳನ್ನು ಬಳಸಬಾರದು ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಈ ಎಲ್ಲಾ ನಿಯಮಗಳನ್ನು ಮೂರ್ತಿ ಪ್ರತಿಷ್ಠಾಪಿಸುವವರಿಗೆ ತಿಳಿಸಬೇಕು ಎಂದು ಸಿಪಿಐ ಹಾಗೂ ಪಿಎಸ್ಐ ಅವರಿಗೆ ಹೇಳಿದರು.
ನಂತರ ಮಾತನಾಡಿದ ಕೆಂಭಾವಿ ಠಾಣಾಧಿಕಾರಿ ರಾಜಶೇಖರ ರಾಠೋಡ ಗಣಪತಿ ಪ್ರತಿಷ್ಠಾಪನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕು ವಿಸರ್ಜನಾ ಕಾರ್ಯ ಕ್ರಮದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಯಾವದೇ ಅಹಿತಕರ ಘಟನೆಗಳು ಆಗದಂತೆ ಶಾಂತಿಯುತವಾಗಿ ಯಶಸ್ವಿಗೊಳಿಸಲು ಪೋಲಿಸ್ ಇಲಾಖೆಗಳೊಂದಿಗೆ ಸಹಕರಿಸಬೇಕು ಎಂದರು
ಈ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಂಘ ಸಂಸ್ಥೆಯವರು ಹಾಗೂ ಮುಸ್ಲಿಂ ಬಾಂಧವರು. ಕಂದಾಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಾಗಿಯಾಗಿ ಸಭೆಯನ್ನು ಯಶಸ್ವಿಗೊಳಿಸಿದರು

ವರದಿ:- ಸಿದ್ದಪ್ಪ ಪಟ್ಟೇದಾರ್
