ಆನ್‌ಲೈನ್ ವಂಚನೆ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆಯನ್ನು ಸಿ.ಸಿ.ಬಿ. ಆರ್ಥಿಕ ಅಪರಾಧ ದಳದಲ್ಲಿ ತನಿಖೆಯನ್ನು ಕೈಗೊಳ್ಳಲಾಯಿತು. ಈ ಪ್ರಕರಣದಲ್ಲಿ ಆರೋಪಿಗಳು ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿ GG Online private limited ಎಂಬ ಕಂಪನಿಯ ಹೆಸರಿನಲ್ಲಿ ಕಛೇರಿಯನ್ನು ತೆರೆದು, ಸಾರ್ವಜನಿಕರಿಗೆ ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ GGO ಎಂಬ ಕ್ರಿಷ್ಟೋ ಕರೆನ್ಸಿಯನ್ನು ನೀಡುವುದಾಗಿ ತಿಳಿಸಿ, ಈ ಕ್ರಿಷ್ಟೋ ಕರೆನ್ಸಿಯನ್ನು ಅಂತರಾಷ್ಟ್ರೀಯ ಕ್ರಿಸ್ಟೋ ವಿನಿಮಯ ಕೇಂದ್ರದಲ್ಲಿ ಪರಿಚಯಿಸುವುದಾಗಿಯೂ, ಒಮ್ಮೆ ಅಂತರಾಷ್ಟ್ರೀಯ ಕ್ರಿಷ್ಟೋ ವಿನಿಮಯ ಕೇಂದ್ರದಲ್ಲಿ ಪರಿಚಯಿಸಿದ ನಂತರ ಇದಕ್ಕೆ ಬಿಟ್ ಕಾಯಿನ್ ಬೆಲೆ ಬರುವುದಾಗಿ ನಂಬಿಸಿ ಕಡಿಮೆ ಅವಧಿಯಲ್ಲಿ ಶ್ರೀಮಂತರಾಗುವ ಆಸೆಯನ್ನು ತೋರಿಸಿರುತ್ತಾರೆ.
ಸಾರ್ವಜನಿಕರು ಈ ಕಂಪನಿಯ ಬಗ್ಗೆ ಹೆಚ್ಚು ಪ್ರಚಾರ ಮಾಡಲೆಂದು ಮೊದಮೊದಲು ಹೂಡಿಕೆ ಮಾಡಿದವರಿಗೆ ರಿವಾರ್ಡ್ ಎಂಬ ಹೆಸರಿನಲ್ಲಿ ಪ್ರತಿ ದಿನ ಅವರು ಹೂಡಿಕೆ ಮಾಡಿದ ಹಣಕ್ಕೆ ಶೇಕಡ 15% ರಷ್ಟು ಹಣವನ್ನು ನೀಡಿದ್ದು, ಮೊದಲು ಹೂಡಿಕೆ ಮಾಡಿದ ಜನರು ಹಣ ಬರುವುದನ್ನು ನೋಡಿ ಕಂಪನಿಯವರು ಹೇಳುತ್ತಿರುವುದು ನಿಜವೆಂದು ಭಾವಿಸಿ ಹೂಡಿಕೆದಾರರು ತಮ್ಮ ಸಂಬಂಧಿಕರು, ಸ್ನೇಹಿತರಿಗೆ ಈ ವಿಷಯವನ್ನು ತಿಳಿಸಿದ್ದು, ಹಾಗೂ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್, ಇಸ್ಟಾಗ್ರಾಮ್, ವಾಟ್ಸಾಪ್ ಹಾಗೂ ಇತರೆ ಮಾದ್ಯಮಗಳಲ್ಲಿ ಸಹಾ ಪ್ರಚಾರ ಮಾಡಿರುತ್ತಾರೆ. ಇದರಿಂದ ಸುಮಾರು ಒಂದು ವರ್ಷದಲ್ಲಿ 1300-1400 ಜನರು, ಸುಮಾರು 5 ರಿಂದ 6 ಕೋಟಿ ಹಣವನ್ನು ಈ ಕಂಪನಿಯಲ್ಲಿ ಹೂಡಿಕೆ ಮಾಡಿಸಿಕೊಂಡು ಯಾರಿಗೂ ಹಣವನ್ನು ವಾಪಸ್ಸು ನೀಡದೇ ಕಂಪನಿಯವರು ಮೋಸ ಮಾಡಿರುತ್ತಾರೆ. ಅಲ್ಲದೇ ಹೂಡಿಕೆ ಮಾಡಿದವರಿಗೆ GGO ಎಂಬ ಕ್ರಿಷ್ಟೋ ಕರೆನ್ಸಿಯನ್ನು ನೀಡಿದ್ದು, ಈ ಕ್ಲಿಷ್ಟೋ ಕರೆನ್ಸಿಗೆ ಮಾರುಕಟ್ಟೆಯಲ್ಲಿ ಯಾವುದೇ ಮಾನ್ಯತೆ ಹಾಗೂ ಮೌಲ್ಯವಿರುವುದಿಲ್ಲವೆಂದು ತನಿಖಾಧಿಕಾರಿಯವರಿಗೆ ಕಂಡುಬಂದಿದ್ದರಿಂದ ಪ್ರಕರಣದಲ್ಲಿ 3 ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆದಿದೆ.
ಈ ಪ್ರಕರಣದಲ್ಲಿ ಅಪರ ಪೊಲೀಸ್ ಆಯುಕ್ತರು, ಪಶ್ಚಿಮ ಹಾಗೂ ಉಪ ಪೊಲೀಸ್ ಪೊಲೀಸ್ ಆಯುಕ್ತರು. ಅಪರಾಧ-2 ರವರ ಮಾರ್ಗದರ್ಶನದಲ್ಲಿ ಎ.ಸಿ.ಪಿ. ಆರ್ಥಿಕ ಅಪರಾಧ ದಳ ರವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಸಾರ್ವಜನಿಕರಿಗೆ ಸೂಚನೆ: ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ಕ್ರಿಪ್ಸ್ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಹಣ ಗಳಿಸಬಹುದೆಂಬ ಆಸೆಯಿಂದ ಈ ರೀತಿಯಾದ ನಕಲಿ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಮೋಸ ಹೋಗುತ್ತಿದ್ದು, ಆನ್‌ಲೈನ್‌ನಲ್ಲಿ ಅಥವಾ ಕ್ರೀಷ್ಟೋ ಕರೆನ್ಸಿ ಎಂಬ ಹೆಸರಿನಲ್ಲಿ ಯಾವುದೇ ಜಾಹೀರಾತುಗಳನ್ನು ನೋಡಿ ಹಣ ಹೂಡಿಕೆ ಮಾಡುವಾಗ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಅವಶ್ಯಕವಾಗಿರುತ್ತದೆ.