ಕೊಲೆ ಪ್ರಕರಣದಲ್ಲಿ ಆರೋಪಿ ವಶ ದಿನಾಂಕ: 22.04.2022 ರಂದು ದೂರುದಾರರಾದ ಶ್ರೀ.ವೆಂಕಟೇಶ್.ಸಿ. ಬಿನ್.ಲೇಟ್.ಚಿನ್ನಪ್ಪ, ವಾಸ: ಕೆರೆಕೋಡಿ, ಬಂಗಾರಪೇಟೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದಲ್ಲಿ ತನ್ನ ಮಗನಾದ ಹರೀಶ್ @ ಕಬಾಬ್ ಎಂಬಾತನನ್ನು ಬಂಗಾರಪೇಟೆಯ ಕಾರಹಳ್ಳಿ ರುದ್ರಭೂಮಿ (ಸ್ಮಶಾನ) ದ ಬಳಿ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದು, ಈ ಬಗ್ಗೆ ನೀಡಿದ ದೂರಿನ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.
ಸದರಿ ಪ್ರಕರಣದಲ್ಲಿ ಮೃತನಾದ ಹರೀಶ್ @ ಕಬಾಬ್ ಎಂಬಾತನನ್ನು ಕೊಲೆ ಮಾಡಿರುವ ಆರೋಪಿ ಯಾರೆಂದು ಗೊತ್ತಿಲ್ಲದೆ ಇದ್ದು, ನಂತರ ಕೇಸಿನಲ್ಲಿ ಆರೋಪಿಯನ್ನು ಪತ್ತೆ ಮಾಡಲು ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ.ಕೆ.ಧರಣೀದೇವಿ IPS., ರವರ ಆದೇಶದ ಮೇರೆಗೆ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ವಿ.ಎಲ್.ರಮೇಶ್ ರವರ ಮಾರ್ಗದರ್ಶನದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ.ಟಿ.ಸಂಜೀವರಾಯಪ್ಪ ಹಾಗೂ ಪ್ರೋ ಪಿ.ಎಸ್.ಐ. ಸುನೀಲ್ ಹಾಗೂ ಸಿಬ್ಬಂದಿಯವರಾದ ಅನಿಲ್ ಕುಮಾರ್, ರಾಮಕೃಷ್ಣಾರೆಡ್ಡಿ, ಮಂಜುನಾಥರೆಡ್ಡಿ, ಮುನಾವರ್ ಪಾಷಾ ರವರನ್ನು ನೇಮಿಸಿದ್ದು, ಅದರಂತೆ ಸದರಿಯವರು ಬಾತ್ಮೀದಾರರಿಂದ ಮಾಹಿತಿಯನ್ನು ಪಡೆದು ಪತ್ತೆ ಕಾರ್ಯ ಕೈಗೊಂಡಿದ್ದು, ಮಾಹಿತಿಯ ಮೇರೆಗೆ ಆರೋಪಿಯಾದ ಸೂರ್ಯ @ ಗೋವಿಂದ ಬಿನ್.ಲೇಟ್.ವಿಜಯ್ ಕುಮಾರ್, ವಯಸ್ಸು ೨೩ ವರ್ಷ, ವನ್ನಿಕುಲ ಜನಾಂಗ, ಪೈಂಟಿಂಗ್ ಕೆಲಸ, ವಾಸ: ಕೆರೆಕೋಡಿ ಗ್ರಾಮ, ಬಂಗಾರಪೇಟೆ ಎಂಬಾತನನ್ನು ದಿನಾಂಕ: 15.09.2022 ರಂದು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದಾಗ ತಾನು ಹರೀಶ್ @ ಕಬಾಬ್ ರವರು ಮಧ್ಯ ಸೇವನೆ ಮಾಡಿದಾಗ ತನ್ನನ್ನು ಜಗಳ ಮಾಡಿ ಹೊಡೆಯುತ್ತಿದ್ದರಿಂದ ಆ ದಿನ ತಾನು ಬೀರ್ ಬಾಟಲ್ ತೆಗೆದುಕೊಂಡು ಹರೀಶ @ ಕಬಾಬ್ ನನ್ನ ಹೊಡೆಯಲು ಕರೆದುಕೊಂಡು ಹೋಗಿ ಮಧ್ಯವನ್ನು ಕುಡಿಸಿ ಸಾಯಿಸುವ ಉದ್ದೇಶದಿಂದ ಕೆಳಗೆ ತಳ್ಳಿ ಪಕ್ಕದಲ್ಲಿಯೇ ಇದ್ದ ದೊಡ್ಡ ಸೈಜು ಕಲ್ಲನ್ನು ಎತ್ತಿ ತಲೆಯ ಮೇಲೆ ಹಾಕಿ ನಂತರ ಕುಡಿಯಲು ತಂದಿದ್ದ ಬೀರ್ ಬಾಟಲ್ ಹೊಡೆದು ಬಾಟಲ್ ಚೂಪಾದ ಗಾಜಿನಿಂದ ಹರೀಶ್ @ ಕಬಾಬ್ ಎಂಬಾತನ ಕುತಿಗೆಗೆ ತಿವಿದು ಕೊಲೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನಂತರ ದಸ್ತಗಿರಿ ಮಾಡಿರುತ್ತೆ.
ಕೊಲೆ ಪ್ರಕರಣದಲ್ಲಿ ಆರೋಪಿಯು ಯಾರೆಂದು ತಿಳಿಯದೆ ಇದ್ದರೂ ಸಹ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿರುವುದನ್ನು ಪೊಲೀಸ್ ಅಧೀಕ್ಷಕರು, ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.