ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ಸರಹದ್ದಿನ ಸುಂಕದಕಟ್ಟೆಯ ಬಳಿ ದಿನಾಂಕ:03/04/2024 ರಂದು ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದ ಪಿರಾದಿಯ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೈಯಲು ಪ್ರಯತ್ನಿಸಿದ್ದು, ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.
ತನಿಖೆಯನ್ನು ಕೈಗೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ, ಆ ದಿನವೇ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಸಿಕೊಂಡಿರುತ್ತಾರೆ. ಅವರುಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ವಶಕ್ಕೆ ಪಡೆದ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ವ್ಯಕ್ತಿಯು ಆತನ ವೈಯಕ್ತಿಕ ದ್ವೇಷದಿಂದ, ಪಿರಾದಿಗೆ ಹಲ್ಲೆ ಮಾಡಿ, ಕೊಲೆಗೈಯಲು ಆತನ ಸಹಚರನೊಂದಿಗೆ ಸೇರಿಕೊಂಡು, ಈ ಹಿಂದೆ ಹಲವಾರು ಅಪರಾಧ ಹಿನ್ನೆಲೆಯುಳ್ಳ ಅಂದರೆ, ಕಳ್ಳತನದ ಕೇಸು ಮತ್ತು ಮಾದಕ ವಸ್ತು ಗಾಂಜಾ ಮಾರಾಟದ ಕೇಸು ಹೊಂದಿದ್ದ.
ವ್ಯಕ್ತಿಗೆ ಒಂದು ಲಕ್ಷ ರೂಪಾಯಿ ಕೊಟ್ಟು, ಕೊಲೆಗೈಯಲು ಸುಪಾರಿಯನ್ನು ನೀಡಿರುತ್ತಾರೆ ಎಂದು ತನಿಖೆಯಿಂದ ತಿಳಿದು ಬಂದಿರುತ್ತದೆ. ಸುಪಾರಿ ಪಡೆದುಕೊಂಡ ವ್ಯಕ್ತಿಯು ಶಿವಮೊಗ್ಗ ಜಿಲ್ಲೆಯ ವಾಸಿಯಾಗಿರುತ್ತಾನೆ.
ದಿನಾಂಕ:07/04/2024 ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಶಿವಮೊಗ್ಗ ಜಿಲ್ಲೆಯ ವಾಸಿಯಾದ ವ್ಯಕ್ತಿಯನ್ನು ತುಮಕೂರಿನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್ ಎಸ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀ.ಚಂದನ್ ಕುಮಾರ್.ಎನ್ ಸಹಾಯಕ ಪೊಲೀಸ್ ಆಯುಕ್ತರು, ವಿಜಯನಗರ ಉಪ ವಿಭಾಗ ರವರ ನೇತೃತ್ವದಲ್ಲಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್/ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.