ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಕಿರುಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಪತ್ತೆಹಚ್ಚುವಲ್ಲಿ ಡಿಸಿಐಬಿ ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ದಿನಾಂಕ 4-2-2021 ರಂದು ದೊರೆತ ಮಾಹಿತಿ ಮೇರೆಗೆ ಡಿಸಿಐಬಿ ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸರು ಬಿಳಿಗೇರಿ ಗ್ರಾಮದ ಕಿರುಹೊಳೆಯಲ್ಲಿ ನಡೆಯುತ್ತಿದ್ದ ಮರಳುಗಾರಿಕೆಯನ್ನು ಪತ್ತೆಹಚ್ಚಿ ಮರಳು ತುಂಬಿದ ಒಂದು ಮಿನಿ ಟಿಪ್ಪರ್, ಹೊಳೆಯ ದಡದಲ್ಲಿ ಸಂಗ್ರಹಿಟ್ಟಿದ್ದ 2 ಲೋಡಿನಷ್ಟು ಮರಳು ಮತ್ತು ಒಂದು ಕಬ್ಬಿಣದ ತೆಪ್ಪವನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣದ ಪತ್ತೆಕಾರ್ಯವನ್ನು
ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ಡಿಸಿಐಬಿ ಪಿ.ಐ. ಶ್ರೀ ಐ.ಪಿ.ಮೇದಪ್ಪ, ಮಡಿಕೇರಿ ಗ್ರಾಮಾಂತರ ಠಾಣೆಯ ಪಿ.ಐ. ಶ್ರೀ ರವಿಕಿರಣ್, ಡಿಸಿಐಬಿ ಎಎಸ್ಐ ಶ್ರೀ ಹಮೀದ್ ಸಿಬ್ಬಂದಿಗಳಾದ ನಿರಂಜನ್, ವೆಂಕಟೇಶ್, ವಸಂತ, ಯೋಗೇಶ್ ಕುಮಾರ್, ಶರತ್ ರೈ, ಸುರೇಶ್, ಅನಿಲ್ ಕುಮಾರ್, ಮಡಿಕೇರಿ ಗ್ರಾಮಾಂತರ ಠಾಣೆಯ ಕೆ.ಡಿ.ದಿನೇಶ್ ಚಾಲಕರುಗಳಾದ ಶಶಿಕುಮಾರ್, ಅಭಿಷೇಕ್ ಮತ್ತು ಪ್ರವೀಣ್ ರವರು ಭಾಗವಹಿಸಿದ್ದು ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿ ಯನ್ನು ಪ್ರಶಂಸಿಸಲಾಗಿದೆ.