ಕೊಡಗು-ಕೇರಳ ಗಡಿಪ್ರದೇಶದ ಮಾಕುಟ್ಟ ಗೇಟ್ ನಲ್ಲಿ ಕೋವಿಡ್ ಸಂಬಂಧ ತೆರೆದಿರುವ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಕರ್ತವ್ಯದಲ್ಲಿದ್ದ ಅಧಿಕಾರಿಗಳಿಂದ ತಪಾಸಣಾ ಕಾರ್ಯದ ಬಗ್ಗೆ ಮಾಹಿತಿ ಪಡೆಯಲಾಯಿತು. ಅಲ್ಲದೆ ಕೇರಳ ಕಡೆಯಿಂದ ಬರುವ ವಾಹನ ಮತ್ತು ಜನರ ಬಗ್ಗೆ ತೀವ್ರ ತರಹದ ನಿಗಾವಹಿಸುವಂತೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು. ಕೇರಳದಿಂದ ಖಾಸಗಿ ವಾಹನ ಮತ್ತು ಬಸ್ ಗಳಲ್ಲಿ ಜಿಲ್ಲೆಯ ಕಡೆಗೆ ಬರುವವರು ಕಡ್ಡಾಯವಾಗಿ 72 ಗಂಟೆಯ ಒಳಗೆ ಮಾಡಿಸಿದ ಆರ್ ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಹೊಂದುವುದು ಕಡ್ಡಾಯವಾಗಿದ್ದು, ಜಿಲ್ಲೆಯ ಗಡಿಗಳ ಮೂಲಕ ಬರುವವರನ್ನು ತೀವ್ರತರಹದಲ್ಲಿ ತಪಾಸಣೆ ಮಾಡಲಾಗುತ್ತಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
