ದಿನಾಂಕ 21.06.2022 ರಂದು ಬೆಳಿಗ್ಗೆ ಕೆ.ಜಿ.ಎಫ್ ಪೊಲೀಸ್ ಜಿಲ್ಲೆ ವತಿಯಿಂದ ಡಿ.ಎ.ಆರ್ ಪೊಲೀಸ್ ಮೈದಾನದಲ್ಲಿ \”Yoga for Humanity\” \”ಮಾನವೀಯತೆಗಾಗಿ ಯೋಗ\” ಎಂಬ ಘೋಷವಾಕ್ಯದಡಿಯಲ್ಲಿ ಈ ವರ್ಷ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪೊಲೀಸ್ ಅಧೀಕ್ಷಕರಾದ ಡಾ|| ಕೆ. ಧರಣೀದೇವಿ, ಐ.ಪಿ.ಎಸ್, ಪೊಲೀಸ್ ಉಪಾಧೀಕ್ಷಕರಾದ ಶ್ರೀ. ಪಿ. ಮುರಳಿಧರ, ಯೋಗ ತರಬೇತುದಾರರಾದ ಶ್ರೀ. ಪ್ರವೀಣ್ ಸಿಂಗ್ ರಾಣ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಾಹಿಸಿದರು.
