ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ಸರಹದ್ದಿನ ಮಾಗಡಿ ಮುಖ್ಯರಸ್ತೆ, ಸುಮನಹಳ್ಳಿ ಜಂಕ್ಷನ್ ಬಳಿ ಬೆಳಗಿನ ಜಾವ ಸುಮಾರು 05-15 ಗಂಟೆಯ ಸಮಯದಲ್ಲಿ ಪಿರಾದುದಾರರು ಮಾಗಡಿಗೆ ಹೋಗಲು ಬಸ್‌ಗಾಗಿ ಕಾಯುತ್ತಿರುವಾಗ ಎಕ್ಸ್‌ಪ್ರೆಸ್ ಎಲೆಕ್ನಿಕ್ ಕಾರಿನಲ್ಲಿ ಬಂದ 03 ಜನ ಅಪರಿಚಿತ ಅಸಾಮಿಗಳು ಪಿರಾದುದಾರರನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಸ್ವಲ್ಪ ದೂರ ಹೋಗಿ ನಂತರ ಅವರಿಗೆ ಡ್ರಾಗರ್ ತೋರಿಸಿ ಕೈಗಳಿಂದ ಹಲ್ಲೆ ಮಾಡಿ ಅವರ ಬಳಿ ಇದ್ದ 2.500/- ರೂ ನಗದು ಹಣ ಮತ್ತು ಫೋನ್ ಪೇ ಸ್ಕ್ಯಾನರ್ ಮೂಲಕ 2,500/- ರೂ ಹಣವನ್ನು ಪೇ.ಟಿ.ಎಂ. ಮೂಲಕ ವರ್ಗಾಯಿಸಿಕೊಂಡು ನಂತರ ಅವರನ್ನು ನೆಲಮಂಗಲ ಸೊಂಡೇಕೊಪ್ಪ ರಸ್ತೆ ಸಿದ್ದಗಂಗಾ ಕಾಲೇಜ್ ಬಸ್ ಸ್ಟಾಪ್ ಬಳಿ ಬಿಟ್ಟು ಪರಾರಿಯಾಗಿರುತ್ತಾರೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ ಪೊಲೀಸರು ದಿ:-05-09-2023 ರಂದು ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಪೊಲೀಸ್ ಬಂಧನಕ್ಕೆ ಪಡೆದು ಸದರಿ ಆರೋಪಿಗಳಿಂದ ಸುಮಾರು 60,100/- ರೂ ಬೆಲೆ ಬಾಳುವ ಮೂರು ಮೊಬೈಲ್ ಫೋನುಗಳು, ಒಂದು ಚಿನ್ನದ ಚಿಕ್ಕ ಕಿವಿಯೋಲೆ ಮತ್ತು 10,100/- ನಗದು ಹಣ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಟಾಟಾ ಟಿಗೋರ್ ಎಕ್ಸ್‌ಪ್ರೆಸ್ ಎಲೆಕ್ನಿಕ್ ಕಾರು, ಒಂದು ಎ.ಟಿ.ಎಂ, ಕಾರ್ಡ್, ಒಂದು ಎವೋ ಕಂಪನಿಯ
ಮೊಬೈಲ್ ಫೋನ್ ಮತ್ತು ಒಂದು ಡ್ರ್ಯಾಗರ್‌ಳನ್ನು ವಶಪಡಿಸಿಕೊಳ್ಳವಲ್ಲಿ ಯಶಸ್ವಿಯಾಗಿರುತ್ತಾರೆ.
ಕಾರ್ಯಚರಣೆಯಿಂದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ 02 ಪ್ರಕರಣ
ದಾಖಲಾಗಿರುತ್ತದೆ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಯ \\ ಸುಲಿಗೆ ಪ್ರಕರಣ ಪತ್ತೆಯಾಗಿರುತ್ತವೆ.
ಸದರಿ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಎಸ್. ಗಿರೀಶ್ ರವರ ಸೂಕ್ತ ಮಾರ್ಗದರ್ಶನದಲ್ಲಿ ವಿಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರವರಾದ ಶ್ರೀ. ಚಂದನ್ ಕುಮಾರ್, ಎನ್. ರವರ ನಿರ್ದೇಶನದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ. ನಾಗೇಶ್, ಜಿ.ಎನ್ ರವರು ಹಾಗೂ ಠಾಣಾ ಸಿಬ್ಬಂದಿರವರುಗಳ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.