ತಂದೆ ತಾಯಿ ಮತ್ತು ಕುಟುಂಬದವರು ಅಮರನಾಥ ಯಾತ್ರೆಗೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಹೊಂಚುಹಾಕಿ ಕನ್ನ ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು, ದಿನಾಂಕ:23-07-2023 ರಂದು ಪ್ರಕರಣದ ಕೃತ್ಯವೆಸಗಿದ್ದ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿಯ ಮಾಹಿತಿ ಮೇರೆಗೆ ಒಟ್ಟು 502 ಗ್ರಾಂ ತೂಕದ | ಚಿನ್ನದ ಕಡಗ, 7 ಚಿನ್ನದ ಬಳೆ, ಒಂದು ಚಿನ್ನದ ನಾಣ್ಯ, 2 ಬ್ರಾಸ್ ಲೆಟ್, 1 ಚಿನ್ನದ ನಕ್ಷೆಸ್. 13 ಚಿನ್ನದ ಮುತ್ತಿನ ಸರಗಳು, 1 ಡಾಲರ್, 1 ಬೈತಲೆ, 4 ಚಿನ್ನದ ಉಂಗುರ, 13 ಜೊತೆ ಚಿನ್ನದ ಓಲೆ, ಒಟ್ಟು ಮೌಲ್ಯ 30,00,000/-ರೂ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿಯು ಈ ಹಿಂದೆ ಬೆಂಗಳೂರು ನಗರದಲ್ಲಿ ಕಳೆದ 25 ವರ್ಷಗಳಿಂದ ಮನೆಗಳ ಬೀಗ ಮುರಿದು ಕನ್ನ ಕಳವು ಮಾಡುವ ಆರೋಪಿಯಾಗಿರುತ್ತಾನೆ. ಈತನ ವಿರುದ್ಧ ಬೆಂಗಳೂರು ನಗರದ ಬನಶಂಕರಿ ಸಿ.ಕೆ.ಅಚ್ಚುಕಟ್ಟು, ಸುಬ್ರಮಣ್ಯ, ನಗರ, ಮಡಿವಾಳ, ಗಿರಿನಗರ, ರಾಮಮೂರ್ತಿನಗರ, ಕುಮಾರಸ್ವಾಮಿ ಲೇಔಟ್, ಸುಬ್ರಮಣ್ಯಪುರ ಪೊಲೀಸ್ ಠಾಣೆ ಹಾಗೂ ಇನ್ನೂ ಇತರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿಯು ಈ ಹಿಂದೆ ಭಾಗಿಯಾದ ಪುಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಸುಮಾರು ವರ್ಷಗಳ ನಂತರ ಆರೋಪಿಯನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಈ ಕಾರ್ಯಚರಣೆಯನ್ನು ಬೆಂಗಳೂರು ನಗರ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ
ಶ್ರೀ.ಪಿ.ಕೃಷ್ಣಕಾಂತ್, ರವರ ಮಾರ್ಗದರ್ಶನದಲ್ಲಿ, ಶ್ರೀಪವನ್.ಎನ್. ಸಹಾಯಕ ಪೊಲೀಸ್ ಆಯುಕ್ತರು
ಸುಬ್ರಮಣ್ಯಪುರ ಉಪ-ವಿಭಾಗ ರವರ ನೇತೃತ್ವದಲ್ಲಿ, ಶ್ರೀ.ಕೆ.ಆರ್ ಮಂಜುನಾಥ, ಪೊಲೀಸ್ ಇನ್ಸಪೆಕ್ಟರ್
ಸುಬ್ರಮಣ್ಯಪುರ ಪೊಲೀಸ್ ಠಾಣೆ ಹಾಗು ಸಿಬ್ಬಂದಿಯವರುಗಳು ಸದರಿ ಪ್ರಕರಣವನ್ನು ಬೇಧಿಸಿ,
ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ.ಬಿ.ದಯಾನಂದ ರವರು ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ಶ್ರೀ. ಎನ್.ಸತೀಶ್ ಕುಮಾರ್ ರವರು ಶ್ಲಾಘಿಸಿರುತ್ತಾರೆ