ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಿ.ಇ.ಎ.ಎಲ್ ಲೇಔಟ್‌ನಲ್ಲಿ ವಾಸವಾಗಿದ್ದ ಪಿರಾದುದಾರದ ಮನೆಯಲ್ಲಿ ಯಾರೋ ಕಳ್ಳರು ಚಿನ್ನದ ಆಭರಣಗಳನ್ನು ಕನ್ನ ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ತನಿಖೆಯನ್ನು ಕೈಗೊಂಡ ಪೊಲೀಸರು ದಿನಾಂಕ:02-09-2023 ರಂದು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಆರೋಪಿಯು ನೀಡಿದ ಮಾಹಿತಿ ಮೇರೆಗೆ ಸುಮಾರು 4,50,000/-ರೂ ಬೆಲೆ ಬಾಳುವ ಸುಮಾರು 80 ಗ್ರಾಂ ತೂಕದ ಚಿನ್ನದ ಆಭರಣಗಳು, ಅನ್ನಪೂರ್ಣೆಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಂದು ಹೊಂಡಾ ಡಿಯೋ ವಾಹನ ಮತ್ತು ಕನ್ನ ಕಳವು ಮಾಡಲು ಬಳಸಿದ್ದ ಯಮಹ ಎಫ್‌ಜೆಡ್ ಮೋಟಾರ್‌ಸೈಕಲ್‌ಗಳನ್ನು ವಶ ಪಡಿಸಿಕೊಂಡಿರುತ್ತೆ.
ಆರೋಪಿಯು ಈ ಹಿಂದೆ ರಾಜರಾಜೇಶ್ವರಿ ನಗರ, ಬನಶಂಕರಿ ಚೆನ್ನಮ್ಮನಕೆರೆ ಅಚ್ಚುಕಟ್ಟು, ಜಯನಗರ, ಜೆ.ಪಿ.ನಗರ, ಕೆಂಗೇರಿ, ಬೆಳಂದೂರು ಹಾಗೂ ಇನ್ನಿತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕನ್ನ ಕಳವು, ಸುಲಿಗೆ ಹಾಗೂ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ಈತನ ವಿರುದ್ಧ ವಾರಂಟ್‌ಗಳನ್ನು ಹಾಗೂ ಪ್ರೊಕ್ಲೊ ಕ್ಷಮೆಷನ್‌ಗಳನ್ನು ಘನ ನ್ಯಾಯಾಲಯ ಹೊರಡಿಸಿರುತ್ತದೆ.
ಸದರಿ ಕಾರ್ಯಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮಣ್.ಬ.ನಿಂಬರಗಿ, ಕೆಂಗೇರಿಗೇಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಭರತ್.ಎಸ್.ರೆಡ್ಡಿ ರವರುಗಳ ಮಾರ್ಗದರ್ಶನದಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಬಿ.ಎ, ಶಿವಕುಮಾರ್ ರವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬುದಿರವರುಗಳ ತಂಡ ಕಾರ್ಯಚಾರಣೆ ನಡೆಸಿ ಆರೋಪಿಯನ್ನು ಪತ್ತೆ ಮಾಡಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.