ಸುಮಾರು 1,06,200/- ರೂ ಬೆಲೆ ಬಾಳುವ 17.7 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು 50,000/- ರೂ ನಗದು ಹಣ ವಶ
ಕಾಮಾಕ್ಷಿಪಾಳ್ಯ ಠಾಣಾ ಸರಹದ್ದಿನ ಕೊಟ್ಟಿಗೇಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಪಿರಾದುದಾರರು ಠಾಣೆಗೆ ಹಾಜರಾಗಿ ದಿನಾಂಕ: 10.09.2023 ರಂದು ಮಧ್ಯಾಹ್ನ 1-00 ಗಂಟೆಯ ಸಮಯದಲ್ಲಿ ತಮ್ಮ ಮನೆಗೆ ಬೀಗ ಹಾಕಿಕೊಂಡು ಮನೆಯ ಬೀಗದ ಕೀಯನ್ನು ತಮ್ಮ ಮನೆಯ ಹೊರಗಡೆ ಇರುವ ಶೂ ಬಾಕ್ಸ್‌ನಲ್ಲಿಟ್ಟು ತಮ್ಮ ಸ್ವಂತ ಊರಿಗೆ ಹೊಗಿದ್ದು, ದಿನಾಂಕ: 22.09.2023 ರಂದು ವಾಪಸ್ಸು ಮನೆಗೆ ಬಂದು ನೋಡಲಾಗಿ ಮನೆಯ ರೂಮಿನ ಬೀರುವಿನಲ್ಲಿದ್ದ 1,00,000/- ರೂ. ನಗದು ಹಣ ಮತ್ತು ಸುಮಾರು 14.5 ಗ್ರಾಂ ತೂಕದ ಚಿನ್ನಾಭರಣಗಳನ್ನು ಮನೆಯ ಯಾವುದೇ ಬಾಗಿಲು/ಕಿಟಕಿ/ಬೀರನ್ನು ಡ್ಯಾಮೇಜ್ ಮಾಡದೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ನಮಗೆ ನಮ್ಮ ಪಕ್ಕದ ಮನೆಯವರ ಮೇಲೆ ಅನುಮಾನವಿರುವುದಾಗಿ ನೀಡಿದ ದೂರಿನ ಮೇರೆಗೆ, ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ದಿನಾಂಕ:25.09.2023 ರಂದು ಪಕ್ಕದ ಮನೆಯ ಆರೋಪಿತೆಯನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿ ಆರೋಪಿತಳಿಂದ ಸುಮಾರು 1,06,200/- ರೂ ಬೆಲೆ ಬಾಳುವ 17.7 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು 50,000/- ರೂ ನಗದು ಹಣವನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿರುತ್ತಾರೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಎಸ್.ಗಿರೀಶ್, ರವರ ಸೂಕ್ತ ಮಾರ್ಗದರ್ಶನದಲ್ಲಿ, ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್‌ರವರಾದ ಶ್ರೀ.ಚಂದನ್ ಕುಮಾರ್ ಎನ್ ರವರ ನೇತೃತ್ವದಲ್ಲಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ, ನಾಗೇಶ್, ಜಿ.ಎನ್ ಹಾಗೂ ಸಿಬ್ಬಂದಿರವರುಗಳು ಕಾರ್ಯಾಚರಣೆಯನ್ನು ನಡೆಸಿ ಆರೋಪಿತಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.
ಪಶ್ಚಿಮ ವಿಭಾಗ, ವಿಜಯನಗರ ಉಪ-ವಿಭಾಗ
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ