ಬೆಂಗಳೂರು ನಗರ, ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ಶ್ರೀ.ವರುಣ್ ರವರಿಗೆ ಸೇರಿದ ಸುಜುಕಿ ಆಕ್ಸಿಸ್ ದ್ವಿಚಕ್ರ ವಾಹನವು ಕಳುವಾದ ಬಗ್ಗೆ ಈ ಹಿಂದೆ 2021 ನೇ ಸಾಲಿನಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ತನಿಖಾ ಕಾಲದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಕಳ್ಳತನ ಮಾಡಿರುವ ಬಗ್ಗೆ ಸಿಬ್ಬಂದಿಗಳಾದ ಶ್ರೀ.ಪ್ರವೀಣ್.ಹೆಚ್ ಮತ್ತು ಶ್ರೀ.ಜಗದೀಶ ಒಲೆಕಾರ್ ರವರು ಮಾಹಿತಿ ಪಡೆದು, ಪ್ರಕರಣದಲ್ಲಿ ಕಳ್ಳತನವಾದ ಮಾಲಿನ ಸಮೇತ ಇಬ್ಬರೂ ಅಸಾಮಿ ಬಾಲಕರನ್ನು ಠಾಣೆಗೆ ಕರೆದುಕೊಂಡು ಹಾಜರುಪಡಿಸಿದ್ದು,ವಿಚಾರಣೆ ಕಾಲದಲ್ಲಿ ಆಸಾಮಿ ಬಾಲಕರು ಕಾನೂನು ಸಂಘರ್ಷಕ್ಕೆ ಒಳಪಟ್ಟಿ ಬಾಲಕರೆಂದು ಕಂಡು ಬಂದಿದ್ದು, ಅವರುಗಳನ್ನು ಅಭೀರಕ್ಷೆಗೆ ಪಡೆದುಕೊಂಡು ಪೋಷಕರಿಗೆ ಮತ್ತು ಸಮಾಜ ಕಾರ್ಯಕರ್ತರು ಎಸ್.ಜೆ.ಪಿ.ಪಿಯು ಬಾಸ್ಕೋ ಸಂಸ್ಥೆ ರವರಿಗೆ ಮಾಹಿತಿ ನೀಡಿದ್ದು, ಅವರ ಸಮಕ್ಷಮ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ರವರುಗಳ ಸಮಕ್ಷಮ ಹೇಳಿಕೆ ಪಡೆದುಕೊಂಡು ಅವರ ಮಾಹಿತಿಯ ಮೇರೆಗೆ ಈ ಕೆಳಕಂಡ ಸುಜುಕಿ ಆಕ್ಸಿಸ್,ಹೊಂಡಾ ಡಿಯೋ, ಹೋಡಾ ಶೈನ್, ಹೊಂಡಾ ಆಕ್ಟಿವಾ ಮತ್ತು ಕೈನಿಟೆಕ್ ಹೊಂಡಾ ಸೇರಿದಂತೆ 44 ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ.
ಬೆಂಗಳೂರು ನಗರದ ಜೆ.ಪಿ ನಗರ ಪೊಲೀಸ್ ಠಾಣೆ, ಜಯನಗರ ಪೊಲೀಸ್ ಠಾಣೆ, ಅವಲಹಳ್ಳಿ ಪೊಲೀಸ್ ಠಾಣೆ, ತಿಲಕ್ ನಗರ್ ಪೊಲೀಸ್ ಠಾಣೆ, ಆಂದ್ರ ಪ್ರದೇಶದ ಮದನಪಲ್ಲಿ ಪೊಲೀಸ್ ಠಾಣೆಗಳಿಗೆ ಸಂಬಂಧಪಟ್ಟಂತೆ ತಲಾ ಒಂದೊಂದು ಪ್ರಕರಣಗಳು ಮತ್ತು ಬನಶಂಕರಿ ಪೊಲೀಸ್ ಠಾಣೆ, ಮೈಕೋ ಲೇಔಟ್ ಪೊಲೀಸ್ ಠಾಣೆ, ಬೆಳ್ಳಂದೂರು ಪೊಲೀಸ್ ಠಾಣೆ, ಹೆಚ್.ಎಸ್.ಆರ್ ಪೊಲೀಸ್ ಠಾಣೆಗಳಲ್ಲಿ ತಲಾ ಎರಡೇರಡು ಪ್ರಕರಣಗಳು ಹಾಗೂ ಹೆಚ್.ಎ.ಎಲ್ ಪೊಲೀಸ್ ಠಾಣೆ, ಕೆ.ಆರ್ ಪುರಂ ಪೊಲೀಸ್ ಠಾಣೆಗಳ ತಲಾ ಐದು ಪ್ರಕರಣಗಳು ಅಲ್ಲದೆ ಕಾಡುಗೋಡಿ ಪೊಲೀಸ್ ಠಾಣೆಯ ಆರು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 29 ಪ್ರಕರಣಗಳು ಪತ್ತೆಯಾಗಿರುತ್ತದೆ.