ದಿನಾಂಕ:17/10/2023 ರಂದು ಬೆಂಗಳೂರು ನಗರದ ಆಶೋಕ್‌ನಗರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ರಿಚ್‌ಮಂಡ್ ರಸ್ತೆಯ ನಂ-93 ರ ದಿ ಫೈಟ್ ಹೋಟೆಲ್‌ನ 1ನೇ ಮಹಡಿಯಲ್ಲಿರುವ fuel resto bar ನಲ್ಲಿ ಹೊರರಾಜ್ಯಗಳಿಂದ ಹುಡುಗಿಯರನ್ನು ಕರೆಯಿಸಿ ಬಾರನಲ್ಲಿ ಗ್ರಾಹಕರಿಗೆ ಲೈಂಗಿಕ ಪ್ರಚೋದನೆ ನೀಡುವಂತಹ ಅಸಭ್ಯ ಉಡುಪುಗಳನ್ನು ನೀಡಿ ಬಾರಿನ ಲೈಟ್ ಗಳನ್ನು ನಂದಿಸಿ ಸಣ್ಣ ಬೆಳಕುವುಳ್ಳ ಬಣ್ಣ ಬಣ್ಣದ ಲೈಟ್‌ಗಳನ್ನು ಹಾಕಿ ಗ್ರಾಹಕರು ಹಾಗೂ ಬಾರನ ಹುಡುಗಿಯರು ಕತ್ತಲೆಯಲ್ಲಿ ಕುಳಿತುಕೊಂಡು ಹುಡುಗಿಯರು ಗ್ರಾಹಕರ ಕೈಯನ್ನು ಹಿಡಿದುಕೊಂಡು ತಮ್ಮ ಖಾಸಗಿ ಅಂಗಾಂಗಳನ್ನು ಮುಟ್ಟಿಸಿಕೊಳ್ಳುವುದು ಒಬ್ಬರಿಗೊಬ್ಬರು ಚುಂಬಿಸುವುದು ಹಾಗೂ ಗ್ರಾಹಕರ ಖಾಸಗಿ ಅಂಗಾಂಗಳನ್ನು ಮುಟ್ಟುವುದು ಮಾಡುತ್ತಿರುತ್ತಾರೆಂದು ಮಾಹಿತಿ ಬಂದಿದ್ದು, ಮಾಹಿತಿಯ ಮೇರೆಗೆ ಕೇಂದ್ರ ಅಪರಾಧ ವಿಭಾಗದ ಮಹಿಳಾ ಸುರಕ್ಷಾ ದಳದ ಪೊಲೀಸರು ಕ್ಷಿಪ್ತ ಕಾರ್ಯಾಚರಣೆ ನಡೆಸಿ, ಕಾನೂನು ಉಲ್ಲಂಘನೆ ಮಾಡಿದ 3 ಜನ ಆರೋಪಿಗಳನ್ನು ವಶಕ್ಕೆ ಪಡೆದಿರುತ್ತಾರೆ. ಒಬ್ಬ ಆರೋಪಿ ತಲೆಮರೆಸಿಕೊಂಡಿರುತ್ತಾನೆ. ಈ ದಾಳಿಯ ಸಮಯದಲ್ಲಿ 54 ಜನ ಗ್ರಾಹಕರಿದ್ದು ಮತ್ತು 19 ಜನ ಹುಡುಗಿಯರನ್ನು ರಕ್ಷಿಸಿರುತ್ತದೆ. ಆರೋಪಿತರ ವಿರುದ್ಧ ಆಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಬೆಂಗಳೂರು ನಗರದ ಹಲಸೂರು ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ, ದೊಮ್ಮಲೂರು, ಅಮರಜ್ಯೋತಿ ಹಚ್.ಬಿ.ಸಿ.ಎಸ್ ಲೇಔಟ್, ನಂಬರ್ -541 ಬೋರ್ಡ್ 543, ನಂಬರ್ 72-38 04 ರ ಮಹಡಿಯಲ್ಲಿರುವ ಕ್ಲಬ್ 7 ಪಬ್ ಅಲ್ಲಿ ಮಾಲೀಕರು ಮತ್ತು ವ್ಯವಸ್ಥಾಪಕರು ಹುಡುಗ ಮತ್ತು ಹುಡುಗಿಯರನ್ನು ಕರೆಯಿಸಿಕೊಂಡು ರಾತ್ರಿ ವೇಳೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅವಧಿ ಮೀರಿ ಡ್ಯಾನ್ಸ್ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿ ಹೆಚ್ಚಿನ ದನಿಯನ್ನು ಇಟ್ಟು ಡ್ಯಾನ್ಸ್ ಮಾಡಿಸಿ ಅಬಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಮತ್ತು ಯಾವುದೇ ಅಧಿಕೃತ ಪರವಾನಗಿ ಇಲ್ಲದ ಮತ್ತು 06/07/2013 ದಿನಾಂಕದಂದು ಹೊರಡಿಸಿದ ಕರ್ನಾಟಕ ರಾಜ್ಯ ಪತ್ರದಲ್ಲಿ ನಿರ್ದೇಶಿಸಲ್ಪಟ್ಟ ಸಾರ್ವಜನಿಕ ಮನರಂಜನಾ ಸ್ಥಳಗಳ ಪರವಾಗಿ ಮತ್ತು ನಿಯಂತ್ರಣಗಳಿಗೆ ಸಂಬಂದಿಸಿದ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿ ಅಧಿಕೃತ ಪ್ರಾಧಿಕಾರಿಯಿಂದ ಓಸಿ ಅಪೇಷನ್ ಸರ್ಟಿಪಿಕೆಟ್) ಇಲ್ಲದೆ ಡಿ.ಜೆ.ಮ್ಯೂಸಿಕ್ ಬಳಸಿ ಅನಧಿಕೃತವಾಗಿ ನಡೆಸುತ್ತಿರುವದಾಗಿ ಮಾಹಿತಿ ಬಂದಿದ್ದು, ಮಾಹಿತಿಯ ಮೇರೆಗೆ ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಕ್ಷಿಪ ಕಾರ್ಯಾಚರಣೆ ನಡೆಸಿ, ಆಕ್ರಮವಾಗಿ ಅವಧಿ ಮೀರಿ ಪಬ್ ನಡೆಸುತ್ತಿದ್ದ 3 ಜನ ಆರೋಪಿಗಳನ್ನು ವಶಕ್ಕೆ ಪಡೆದಿರುತ್ತೆ.
ಉಳಿದ 3 ಜನ ಆರೋಪಿಗಳು ತೆರೆಮರೆಸಿಕೊಂಡಿರುತ್ತಾರೆ. ಈ ದಾಳಿಯ ಸಮಯದಲ್ಲಿ 18 ಜನ ಹುಡುಗರು, ಮತ್ತು 55 ಹುಡುಗಿಯರನ್ನು ಸೂಕ್ತ ಕ್ರಮಕ್ಕಾಗಿ ಹಲಸೂರ ಪೊಲೀಸ್ ಠಾಣೆಗೆ ಹಾಜರುಪಡಿಸುತ್ತದೆ. ಆರೋಪಿತರ ವಿರುದ್ಧ ಹಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಹೆಣ್ಣೂರು ಮುಖ್ಯರಸ್ತೆಯ ಕೊತ್ತನೂರು ಪಟೇಲ್ ರಾಮಯ್ಯ ಗಾರ್ಡನ್ ಹಳೇ ಪಿಐಡಿ9 ನಂ-59 ಶಿಗನ್ ಬಾರ್ ಅಂಡ್ ಕಿಚನ್ ಮಾಲೀಕರು ಕಾನೂನು ಬಾಹಿರವಾಗಿ ಅವಧಿ ಮೀರಿದರು ಸಹ ಸದರಿ ಬಾರ್‌ನಲ್ಲಿ ಮಧ್ಯ ಸರಬರಾಜು ಮಾಡಿಕೊಂಡು ಜೋರಾಗಿ ಮ್ಯೂಸಿಕ್ ಸಿಸ್ಟಮ್ ಹಾಕಿ ಗಿರಾಕಿಗಳನ್ನು ಬರಮಾಡಿಕೊಂಡು ಸಣ್ಣ ಸಣ್ಣ ಲೈಟುಗಳನ್ನು ಹಾಕಿಕೊಂಡು ಕತ್ತಲೆಯಲ್ಲಿ ಕುಳಿತುಕೊಂಡು ಪುರುಷ ಮತ್ತೆ ಮಹಿಳೆಯರು ಮಧ್ಯಪಾನ ಸೇವಿಸುತ್ತ 06/07/2013 ದಿನಾಂಕದಂದು ಹೊರಡಿಸಿದ ಕರ್ನಟಕ ರಾಜ್ಯ ಪತ್ರದಲ್ಲಿ ನಿರ್ದೇಶಿಸಲ್ಪಟ್ಟ ಸಾರ್ವಜನಿಕ ನನರಂಜನಾ ಸ್ಥಳಗಳ ಪರವಾನಗಿ ಮತ್ತು ನಿಯಂತ್ರಣಗಳಿಗೆ ಸಂಬಂಧಿಸಿದ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿ ಅಧಿಕೃತ ಪ್ರಾಧಿಕಾರಿಯಿಂದ ಓ(ಆಕ್ಯೂಪೇಷನ್ ಸರ್ಟಿಪಿಕೇಟ್) ಇಲ್ಲದೆ ಡಿ.ಜೆ.ಮ್ಯೂಸಿಕ್ ಬಳಸಿ ಜನಧಿಕೃತವಾಗಿ ನಡೆಸುತ್ತಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯ ಮೇರೆಗೆ ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಪೊಲೀಸರು, ಕ್ಷಿಪ್ತ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಅವಧಿ ಮೀರಿ ಪಬ್ ನಡೆಸುತ್ತಿದ್ದ ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದಿರುತ್ತೆ. ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ.
ಈ ದಾಳಿಯ ಸಮಯದಲ್ಲಿ 32 ಜನ ಹುಡುಗರಿದ್ದು ಅದರಲ್ಲಿ ಹೊರದೇಶದ 8 ಹುಡುಗರಿದ್ದು, ಸೂಡನ್ ದೇಶದ 6 ಜನ , ಕಾಂಗೋ ದೇಶ ಒಬ್ಬ ಮತ್ತು ಯಮನ್ ದೇಶದ ಒಬ್ಬ ಹುಡುಗ ಇರುತ್ತಾರೆ. ಮತ್ತು 13 ಜನ ಮಹಿಳೆಯರನ್ನು ಇದ್ದು ಅದರಲ್ಲಿ ಹೊರದೇಶದ 4 ಮಹಿಳೆಯರಿದ್ದು, ಅದರಲ್ಲಿ ಥೈಲ್ಯಾಂಡ್ ದೇಶದ 3 ಟನ ಮತ್ತು ಸೂಡನ್ ದೇಶದ ಒಬ್ಬಳು ಮಹಿಳೆಯರಿರುತ್ತಾರೆ.
ಇವರನ್ನು ಮುಂದಿನ ಕ್ರಮಕ್ಕಾಗಿ ಜರುಗಿಸಲು ಕೊತ್ತನೂರು ಪೊಲೀಸ್ ಠಾಣೆಗೆ ಹಾಜರುಪಡಿಸಿ ಆರೋಪಿಗಳ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಕಾರ್ಯಚಾರಣೆಗಳಿಂದ ಒಟ್ಟು 9 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಒಟ್ಟು 200 ಜನ ಗ್ರಾಹಕರುಗಳಿದ್ದು ಮತ್ತು ಒಟ್ಟು 87 ಮಹಿಳೆಯರನ್ನು ಸಂರಕ್ಷಣೆ ಮಾಡಿರುತ್ತದೆ, ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಕಾರ್ಯಚರಣೆಯನ್ನು ಬೆಂಗಳೂರು ನಗರ, ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿರವರುಗಳನ್ನೊಳಗೊಂಡ ತಂಡ ಯಶಸ್ವಿ ಕಾರ್ಯಚಾರಣೆ ಕೈಗೊಂಡಿರುತ್ತದೆ.