ರಾಬರ್ಟಸನ್ಪೇಟೆ ಪೊಲೀಸ್ ಠಾಣೆಯ ಮೊ.ಸಂ. 21/2022 ಕಲಂ 454,380 ಐ.ಪಿ.ಸಿ ಹಾಗೂ ಮೊ.ಸಂ 60/2021 ಕಲಂ 454, 4547, 380 ಐ.ಪಿ.ಸಿ ಪ್ರಕರಣಗಳಲ್ಲಿ ಕಳುವಾಗಿರುವ ಮಾಲು & ಆರೋಪಿಗಳ ಪತ್ತೆ ಸಲುವಾಗಿ ಪೊಲೀಸ್ ಅಧೀಕ್ಷಕರಾದ ಡಾ|| ಧರಣೀದೇವಿ, ಐಪಿಎಸ್ ಮತ್ತು ಪೊಲಿಸ್ ಉಪಾಧೀಕ್ಷಕರಾದ ಪಿ. ಮುರಳೀಧರ ರವರ ಮಾರ್ಗದರ್ಶನದಂತೆ ರಾಬರ್ಟ್ಸನ್ಪೇಟೆ ವೃತ್ತ ನಿರೀಕ್ಷಕರಾದ ಕುಮಾರಸ್ವಾಮಿ.ಟಿ.ಆರ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಶ್ರೀಮತಿ. ಶೃತಿ, ಪ್ರೋ.ಪಿ.ಎಸ್.ಐ ಶ್ರೀನಿವಾಸ್ ಪ್ರಸಾದ್. ಎಸ್.ಜಿ ಹಾಗೂ ಸಿಬ್ಬಂದಿಯವರನ್ನು ಒಳಗೊಂಡಂತೆ ವಿಶೇಷ ತಂಡವನ್ನು ರಚಿಸಿದ್ದು, ದಿನಾಂಕ 13.06.2022 ರಂದು ರಾತ್ರಿ 08.00 ಗಂಟೆಯಲ್ಲಿ ಆರೋಪಿಯಾದ ಶಾಂತ ಕುಮಾರ್ ಬಿನ್ ಪ್ರಭು, ವಯಸ್ಸು ೩೩ ವರ್ಷ, ವಾಸ: ಲೂರ್ದನಗರ, ಆಂಡ್ರಸನ್ಪೇಟೆ, ಕೆ.ಜಿ.ಎಫ್, ಹಾಲಿ ವಾಸ-ಪಂಡಾರಂ ಲೈನ್, ಮಾರಿಕುಪ್ಪಂ, ಕೆ.ಜಿ.ಎಫ್ ಎಂಬಾತನನ್ನು ವಿಶೇಷ ತಂಡದವರು ಪತ್ತೆ ಮಾಡಿ, ಆರೋಪಿ ಕಡೆಯಿಂದ 1) 16 ಗ್ರಾಂ ಬ್ರಾಸ್ ಲೈಟ್, 2) 15 ಗ್ರಾಂ ತೂಕದ ಬಂಗಾರದ ನೆಕ್ಲೇಸ್, 3) 2.5 ಗ್ರಾಂ ತೂಕದ ಒಂದು ಜೊತೆ ಬಂಗಾರದ ಓಲೆ, 4) 5.5 ಗ್ರಾಂ ತೂಕದ ಒಂದು ಜೊತೆ ಬಂಗಾರದ ಓಲೆ ಜುಮುಕಿ, ಒಟ್ಟು 38 ಗ್ರಾಂ ತೂಕದ ಬಂಗಾರವನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.
ವಿಶೇಷ ತಂಡದ ಅಧಿಕಾರಿ & ಸಿಬ್ಬಂದಿಯವರ ವಿವರ
1) ಶ್ರೀಮತಿ ಶೃತಿ, ಪಿ.ಎಸ್.ಐ,
2) ಶ್ರೀ.ಶ್ರೀನಿವಾಸ್ ಪ್ರಸಾದ್. ಎಸ್.ಜಿ(ಪ್ರೋ.ಪಿ.ಎಸ್.ಐ)
3) ಶ್ರೀ.ಮಹೇಂದ್ರ ಕುಮಾರ್ ಪಿಸಿ-33
4) ಶ್ರೀ. ಚೇತನ್ ಪಿಸಿ-83
5) ಶ್ರೀ. ಮುರಳಿ ಪಿಸಿ-166,
6) ಶ್ರೀ. ರಘು ಪಿಸಿ-15,
7) ಶ್ರೀ.ಜೆ. ಸತ್ಯ ಪ್ರಕಾಶ್. ಎ.ಹೆಚ್.ಸಿ-74
8) ಶ್ರೀ.ಮನೋಹರ್. ಎ.ಹೆಚ್.ಸಿ-07
9) ಶ್ರೀ.ಮಂಜುನಾಥ. ಸಿ.ಪಿ.ಸಿ-42