ದಿನಾಂಕ: 06-12-2021 ರಂದು ಮಾನ್ಯ ಶ್ರೀ. ಪ್ರವೀಣ್ ಸೂದ್, ಭಾ.ಪೊ.ಸೇ. ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಕರ್ನಾಟಕ ರಾಜ್ಯ, ಬೆಂಗಳೂರು ರವರು ಕಲಬುರಗಿ ನಗರ ಮತ್ತು ಜಿಲ್ಲಾ ಘಟಕಕ್ಕೆ ಭೇಟಿ ನೀಡಿ ಕಲಬುರಗಿ ನಗರ ಮತ್ತು ಜಿಲ್ಲೆಯಲ್ಲಿನ ಕಾನೂನು & ಸುವ್ಯವಸ್ಥೆ ಹಾಗೂ ಅಪರಾಧ ವಿಮರ್ಶನಾ ಸಭೆಯನ್ನು ಕೈಗೊಂಡಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ. ಮನಿಷ ಖರ್ಬಿಕರ್,ಭಾ.ಪೊ.ಸೇ. ಪೊಲೀಸ್ ಮಹಾನಿರೀಕ್ಷಕರು, ಈಶಾನ್ಯ ವಲಯ ಮತ್ತು ಶ್ರೀ ಡಾ.ವೈ.ಎಸ್.ರವಿಕುಮಾರ, ಭಾ.ಪೊ.ಸೇ. ಪೊಲೀಸ ಆಯುಕ್ತರು ಕಲಬುರಗಿ ನಗರ ಹಾಗೂ ಕಲಬುರಗಿ ನಗರದ ಹಾಗೂ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.