ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕಾಶನಗರದಲ್ಲಿರುವ ತಮ್ಮ ದಿನಸಿ ಅಂಗಡಿಯನ್ನು ಪಿರಾದಿಯು ದಿನಾಂಕ 18-06-2023 ರಂದು ರಾತ್ರಿ ಬೀಗ ಹಾಕಿಕೊಂಡು ಹೋಗಿ, ಮರುದಿನ ಬಂದು ನೋಡಲಾಗಿ ಅಂಗಡಿಯ ರೋಲಿಂಗ್ ರೆಟರ್ ಬಾಗಿಲಿನ ಬೀಗ ಹೊಡೆದು ರೂ.50,0M -ಸಾವಿರ ಹಣ ಕಳವಾಗಿರುತ್ತದೆಂದು ನೀಡಿದ ದೂರಿನ ಮೇರೆಗೆ, ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಕನ್ನಾ ಕಳವು ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ, ಆರೋಪಿಯು ನೀಡಿದ ಮಾಹಿತಿ ಮೇರೆಗೆ ಸುಮಾರು
22.08 ಲಕ್ಷ ಮೌಲ್ಯದ 409,39 .ಗ್ರಾಂ ತೂಕದ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿ, 425.8 ಗ್ರಾಂ ತೂಕದ ಬೆಳ್ಳಿಯ
ಆಭರಣಗಳು, 189,15 ಗ್ರಾಂ ನಕಲಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಬಂಧನದಿಂದ
ರಾಜಾಜಿನಗರ ಪೊಲೀಸ್ ಠಾಣೆ ಮತ್ತು ನೆಲಮಂಗಲ ಠಾಣೆಯ ತಲಾ ಒಂದು ಪ್ರಕರಣ ಪತ್ತೆಯಾಗಿರುತ್ತದೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಯು ಹಳೆಯ ಎಂ.ಓ.
ಆಸಾಮಿಯಾಗಿದ್ದು, ಆರೋಪಿಯ ವಿರುದ್ಧ ಬೆಂಗಳೂರು ನಗರದ ಪೀಣ್ಯ, ಗಿರಿನಗರ, ಕಬ್ಬನ್ ಪಾರ್ಕ್, ಕೆ.ಆರ್.ಪುರಂ, ಬನಶಂಕರಿ, ಅಮೃತಹಳ್ಳಿ, ಕೆ.ಜಿ.ಹಳ್ಳಿ, ಚಂದ್ರಾಲೇಔಟ್ ಮತ್ತು ಹೊರಜಿಲ್ಲೆಯಾದ ಚಿಕ್ಕಮಗಳೂರು ನಗರ, ಚಿತ್ರದುರ್ಗ, ಮಂಡ್ಯ, ನೆಲಮಂಗಲ, ತಿಪಟೂರು ಪೊಲೀಸ್ ಠಾಣೆ ಸೇರಿ ಒಟ್ಟು 20 ಕನ್ನಾ ಕಳವು ಪ್ರಕರಣಗಳಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದು ಮಾನ್ಯ ನ್ಯಾಯಾಲಯಗಳ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಳ್ಳುವ ಪ್ರವೃತ್ತಿಯುಳ್ಳ ಚಾಳಿಬಿದ್ದ ಆರೋಪಿಯಾಗಿರುತ್ತಾನೆ.