ಮಾಗಡಿ ರಸ್ತೆ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ, ಗುಬ್ಬಣ್ಣ ಇಂಡಸ್ಟ್ರಿಯಲ್ ಏರಿಯಾದಲ್ಲಿನ ಖಾಸಗಿ ಕಂಪನಿಯನ್ನು ದಿನಾಂಕ 15/07/2023 ರಂದು ರಾತ್ರಿ ಮುಚ್ಚಿಕೊಂಡು ಹೋಗಿ ನಂತರ ಮಾರನೆ ದಿನ ಬೆಳಿಗ್ಗೆ 08.30 ಗಂಟೆಗೆ ಬಂದು ನೋಡಲಾಗಿ, ಕಂಪನಿಯ ಮೇಲ್ಬಾಗದ ಶೀಟ್ ತೆರೆದು ಅಲ್ಲಿಂದ ಒಳಗಡೆ ಪ್ರವೇಶಿಸಿ ಆಫೀಸ್ ರೂಮ್‌ನಲ್ಲಿದ್ದ ಬೀರನ್ನು ಹೊಡೆದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಪತ್ತೆಗಾಗಿ ತಂಡವನ್ನು ರಚನೆ ಮಾಡಿದ್ದು, ಸದರಿ ತಂಡವು ದಿನಾಂಕ.13/07/2023 ರಂದು ಪ್ರಕರಣವನ್ನು ಭೇದಿಸಿ ಕನ್ನ ಕಳವು ಮಾಡುತ್ತಿದ್ದ 03 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ಮಾಹಿತಿಯ ಮೇರೆಗೆ 5.45.000 ರೂ ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶ್ರೀ ಲಕ್ಷ್ಮಣ್, ಬಿ ನಿಂಬರಗಿ, ರವರ ನೇತೃತ್ವದಲ್ಲಿ, ಶ್ರೀ ರವಿ. ಪಿ. ಸಹಾಯಕ ಪೊಲೀಸ್ ಆಯುಕ್ತರು, ವಿಜಯನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಮಾಗಡಿರಸ್ತೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ರಾಜು. ಎಂ.ಎಸ್. ಹಾಗೂ ಸಿಬ್ಬಂದಿಯವರುಗಳು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ
ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ಶ್ರೀ.
ಎನ್.ಸತೀಶ್ ಕುಮಾರ್ ರವರು ಪ್ರಶಂಸಿರುತ್ತಾರೆ.