ಗಿರಿನಗರ ಪೊಲೀಸ್ ಠಾಣಾ ಸರಹದ್ದಿನ 11ನೇ ಬಿ ಕ್ಲಾಸ್ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಪಿರಾದುದಾರರ ಕತ್ತಿನಲ್ಲಿದ್ದ 22 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ, ಸರಗಳ್ಳತನ ಪ್ರಕರಣವನ್ನು ದಾಖಲಿಸಿಕೊಂಡ ಗಿರಿನಗರ ಪೊಲೀಸರು ತನಿಖೆ ಕೈಗೊಂಡು ಪ್ರಕರಣದಲ್ಲಿ ಕೃತ್ಯವೆಸಗಿದ್ದ ಇಬ್ಬರು ಆರೋಪಿತ ಆಸಾಮಿಗಳನ್ನು ದಸ್ತಗಿರಿ ಮಾಡಿ, ಅವರು ನೀಡಿದ ಮಾಹಿತಿ ಮೇರೆಗೆ ಸುಮಾರು 3,04,000/- ಲಕ್ಷ ಬೆಲೆ ಬಾಳುವ 25 ಗ್ರಾಂ ತೂಕದ ಒಂದು ಚಿನ್ನದ ಸರ ಹಾಗೂ 3 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿಗಳು ಹಳೆಯ ಎಂ.ಓ.ಬಿ ಆಸಾಮಿಗಳಾಗಿದ್ದು, ಜೈಲಿನಿಂದ ಹೊರಬಂದ ಮೇಲೆ ದ್ವಿಚಕ್ರ ವಾಹನಗಳನ್ನು
ಕಳ್ಳತನ ಮಾಡಿ, ಚೈನ್ ಸ್ಟ್ಯಾಟಿಂಗ್ ಮಾಡುವುದನ್ನೇ ಚಾಳಿಯಾಗಿಸಿಕೊಂಡಿದ್ದರು. ಇವರ ಬಂಧನದಿಂದ ಗಿರಿನಗರ
ಪೊಲೀಸ್ ಠಾಣೆಯ 03 ಪ್ರಕರಣಗಳು ಹಾಗೂ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ 01 ಪ್ರಕರಣ
ಪತ್ತೆಯಾಗಿರುತ್ತವೆ.
ಬೆಂಗಳೂರು ನಗರದ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಪಿ.ಕೃಷ್ಣಕಾಂತ್, ಮತ್ತು ವಿ.ವಿ.ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಜಿ.ನಾಗರಾಜ ರವರ ಮಾರ್ಗದರ್ಶನದಲ್ಲಿ ಗಿರಿನಗರ. ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ಸಂದೀಪ್ ಕುಮಾರ್.ಬಿ.ಎಸ್. ರವರ ನೇತೃತ್ವದ ಸಿಬ್ಬಂದಿಯವರ ತಂಡ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.