ದಿನಾಂಕ 15-11-2022 ರಂದು ಶಿರಸಿ ಉಪ ವಿಭಾಗ, ವ್ರತ್ತ ಕಚೇರಿ, ನಗರ ಠಾಣೆಗೆ ಭೇಟಿ ನೀಡಿ ಶಿರಸಿ ಉಪ ವಿಭಾಗದ ಎಲ್ಲ ಏಳು ಪೊಲೀಸ್ ಠಾಣೆಗಳ ಅಧಿಕಾರಿಗಳ ಸಭೆ ನಡೆಸಿ ಆಯಾ ಠಾಣಾ ವ್ಯಾಪ್ತಿಯ ಸಮಗ್ರ ಮಾಹಿತಿ ಪಡೆದು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಲಾಯಿತು.
ನಂತರ \” *ಸಿಬ್ಬಂದಿ* *ಸ್ಪಂದನ*\” ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಶಿರಸಿ ಉಪ ವಿಭಾಗದ 7 ಪೊಲೀಸ ಠಾಣೆಗಳ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಜಿಲ್ಲಾ ಪೊಲೀಸ್ ಘಟಕದ AAO ( ಸಹಾಯಕ ಆಡಳಿತಾಧಿಕಾರಿ ) ಹಾಗೂ ಲಿಪಿಕ್ ಸಿಬ್ಬಂದಿಯವರ ಸಮಕ್ಷಮದಲ್ಲಿ ಕುಂದುಕೊರತೆಗಳನ್ನ ಆಲಿಸಿ, ಸಿಬ್ಬಂದಿಗಳ ಕುಂದುಕೊರತೆಗಳಿಗೆ ನಿಯಮಾನುಸಾರ, ವಿಳಂಬವಿಲ್ಲದೆ ಶೀಘ್ರವಾಗಿ ಪರಿಹರಿಸುವಂತೆ AAO ರವರಿಗೆ ( ಸಹಾಯಕ ಆಡಳಿತಾಧಿಕಾರಿ ) ಸೂಚಿಸಲಾಯಿತು.ಹಾಗೂ ಈ ಕಾರ್ಯಕ್ರಮದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿರುವ ಶಿರಸಿ ಉಪ ವಿಭಾಗದ 7 ಪೊಲೀಸ್ ಠಾಣೆಗಳ 7 ಜನ ಪೊಲೀಸ್ ಸಿಬ್ಬಂದಿಗಳಾದ
(1) ಪ್ರವೀಣ .ಎನ್. ಶಿರಸಿ ನಗರ ಠಾಣೆ
(2) ಗಣಪತಿ ಭಂಟ ಶಿರಸಿ ಹೊಸ ಮಾರುಕಟ್ಟೆ ಠಾಣೆ
(3) ಮಹಾದೇವ ನಾಯ್ಕ ಶಿರಸಿ ಗ್ರಾಮೀಣ ಠಾಣೆ
(4) ಅಣ್ಣಪ್ಪ ಬುಡಿಗೇರ ಮುಂಡಗೋಡ ಠಾಣೆ
(5) ಬಸವರಾಜ ಹಗರಿ ಯಲ್ಲಾಪುರ ಠಾಣೆ
(6) ಮಂಜುನಾಥ ನಡುವಿನಮನಿ ಬನವಾಸಿ ಠಾಣೆ
(7) ಮೊಹಮದ್ ಗೌಸ್ ಅಹಮದ್ ಸಾಬ ಸಿದ್ದಾಪುರ ಪೊಲೀಸ್ ಠಾಣೆರವರುಗಳಿಗೆ Cop of the month (ತಿಂಗಳ ಅತ್ಯುತ್ತಮ ಸಾಧಕ)ಅಂತಾ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.