ಕಾರವಾರ – ಇಂದು ದಿನಾಂಕ 02/04/2022 ಉತ್ತರಕನ್ನಡ ಜಿಲ್ಲೆ ಕಾರವಾರ ಪೊಲೀಸ್ ಕವಾಯತು ಮೈದಾನ ದಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ \” ಪೊಲೀಸ್ ದ್ವಜ\” ದಿನಾಚರಣೆ ಯನ್ನು ಆಚರಿಸಲಾಯಿತು. ಮಾನ್ಯ ಪೊಲೀಸ್ ಅಧಿಕ್ಷಕರು ಡಾ //ಸುಮನ್ ಪೆನ್ನೇಕರ್ ರವರು ಮತ್ತು ಮಾನ್ಯ ಅಪರ ಪೊಲೀಸ್ ಅಧಿಕ್ಷಕರು ಶ್ರೀ ಬದ್ರಿನಾಥ್ ಎಸ್. ರವರು ಹಾಜರಿದ್ದು, ಮುಖ್ಯ ಅತಿಥಿ ಗಳಾಗಿ ಶ್ರೀ ವಿನಾಯಕ್ ವಾಮನ್ ನಾಯ್ಕ್ ನಿವೃತ್ತ ಸಹಾಯಕ ಪೊಲೀಸ್ ನಿರೀಕ್ಷಕರವರು ಆಗಮಿಸಿದ್ದರು.
ಮುಖ್ಯ ಅತಿಥಿಗಳ ಆಗಮನದೊಂದಿಗೆ ಆರಂಭವಾದ ಕಾರ್ಯಕ್ರಮ ಪರೇಡ್ ಪರಿವಿಕ್ಷಣೆ, ಆಕರ್ಷಕ ಪಥಸಂಚಲನ, ರಿವ್ಯೂ ಆರ್ಡರ್, ರಾಷ್ಟ್ರ ದ್ವಜ ಹಾಗೂ ಪೊಲೀಸ್ ದ್ವಜಕ್ಕೆ ಗೌರವ ನೀಡುವುದರೊಂದಿಗೆ ವೇದಿಕೆ ಕಾರ್ಯಕ್ರಮ ಆರಂಭ ವಾಯಿತು. ಮಾನ್ಯ ಪೊಲೀಸ್ ಅಧಿಕ್ಷಕರು ಸ್ವಾಗತಿಸಿಕೊಂಡರು ಕಾರ್ಯಕ್ರಮದ ಮೇರು ಹಂತವಾಗಿ ಪೊಲೀಸ್ ದ್ವಜ ಬಿಡುಗಡೆ ಹಾಗೂ ವಿತರಣೆ ನಡೆಯಿತು.
ಮುಖ್ಯ ಅತಿಥಿ ಗಳು ಪೊಲೀಸ್ ಇಲಾಖೆಯ ಪ್ರಾಮುಖ್ಯತೆ ಮತ್ತು ಸಿಬ್ಬಂದಿಗಳ ಕುಂದು ಕೊರತೆಗಳ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವ ಸಮರ್ಪಿಸಲಾಯಿತು. ಮಾನ್ಯ ಅಪರ ಪೊಲೀಸ್ ಅಧಿಕ್ಷಕರು ಉತ್ತರಕನ್ನಡ ಜಿಲ್ಲೆ ಇವರು ವಂದಿಸಿದರು. ಕಾರ್ಯಕ್ರಮಕ್ಕೆ ಸಾರ್ವಜನಿಕರು ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು, ಸೇವಾ ನಿರತ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಹಾಗೂ ಕುಟುಂಬದವರು ಆಗಮಿಸಿದ್ದರು. ಪೊಲೀಸ್ ಸಿಬ್ಬಂದಿಗಳ ಕುಂದು-ಕೊರತೆ ಬಗ್ಗೆ ಚರ್ಚಿಸಲಾಯಿತು. ಕೊರೋನ ನಿಯಮ ವನ್ನು ಪಾಲಿಸಿ ಕಾರ್ಯಕ್ರಮವನ್ನು ನಡೆಸಲಾಯಿತು.