ಉತ್ತರ ಕನ್ನಡ ಜಿಲ್ಲೆಯ ಪೊಲೀಸರ ಮಕ್ಕಳಿಗಾಗಿಯೇ \”ಮಕ್ಕಳ ವಿಶ್ವ\”(kids world) ಎಂಬ ವಿಶೇಷ ಬೇಸಿಗೆ ಶಿಬಿರವನ್ನು ದಿನಾಂಕ:ಮೇ 05 ರಂದು ಜಿಲ್ಲಾ ಪೊಲೀಸ್ ಮೈದಾನದಲ್ಲಿ, ಮಾನ್ಯ ಉತ್ತರಕನ್ನಡ ಪೊಲೀಸ್ ವರಿಷ್ಟಾಧಿಕಾರಿಗಳಾದ ಡಾ. ಸುಮನ್ ಡಿ ಪೆನ್ನೇಕರ್ ರವರು ಉದ್ಘಾಟಿಸಿದ್ದು, ಆಪ್ತ ಸಮಾಲೋಚಕರಾದ ಶ್ರೀ ರಂಜಿತ್ ಜಿ ಟಿ ರವರ ಸಹಯೋಗದಲ್ಲಿ ಮೇ 15 ರವರೆಗೆ ನಡೆಯಲಿದ್ದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಮತ್ತು ಹೆಚ್ಚಿಸಲು ಸಹಕಾರಿಯಾಗುವಂತ ವಿವಿಧ ಕ್ರೀಡಾ ಚಟುವಟಿಕೆಗಳಾದ ಚಿತ್ರಕಲೆ, ಮೆಮೊರಿ ಚಟುವಟಿಕೆಗಳು,ಕ್ಲೇ ಮಾಡೆಲಿಂಗ, ನೃತ್ಯ ಮತ್ತು ನಾಟಕ, ಮಿಮಿಕ್ರಿ, ವಿವಿಧ ಕಲೆಗಳ ಶಿಬಿರವನ್ನು ಆಯೋಜಿಸಿದ್ದು, ಈಗಾಗಲೇ 52 ಮಕ್ಕಳು ಸದುಪಯೋಗ ಪಡೆಯುತ್ತಿದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಮಕ್ಕಳು ಸದುಪಯೋಗ ಪಡೆದುಕೊಳ್ಳಲು ತಿಳಿಸಿರುತ್ತೇನೆ.
