ಕಳೆದ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಮತ್ತು ಹಲ್ಲೆ ಪ್ರಕರಣದ ಆಸಾಮಿಯನ್ನು ಬಂಧಿಸಿದ ಚಿತ್ತಾಕುಲ ಪೊಲೀಸರು 1993 ರಲ್ಲಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 68/1993ಕಲಂ 143, 147, 148, 302 354, ಜತೆಗೆ 149 ಐಪಿಸಿ ಪ್ರಕರಣದಲ್ಲಿ ಮತ್ತು ಅ. ಕ್ರ. 26/94 ಕಲಂ 324, 326 ಜತೆಗೆ 34 ಐಪಿಸಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ದಿಲೀಪ್ ಶಾಂತ ತ ಲೇಕರ್ ಪ್ರಾಯ 49 ವರ್ಷ, ಸಾ// ಹೊಟೇಗಾಳಿ ಕಾರವಾರ ರವರು ಪ್ರಕರಣದ ಬಳಿಕ ಗೋವಾ ರಾಜ್ಯದ ಕೊಡುಬಿ,ಮಹಾದೇವ ದೇವಸ್ಥಾನದ ಹತ್ತಿರ ಕೆಫೆಮ ತಾಲೂಕ ಎಂಬಲ್ಲಿ ಕಳೆದ 28 ವರ್ಷದಿಂದ ತಲೆಮರೆಸಿಕೊಂಡಿದ್ದ ಈತನನ್ನು ದಿನಾಂಕ 16-04-2021 ರಂದು ಗೋವಾದಲ್ಲಿ ಪತ್ತೆ ಹಚ್ಚಲಾಗಿದೆ .
ಶ್ರೀ. ಶಿವಪ್ರಕಾಶ ದೇವರಾಜು ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ, ಶ್ರೀ. ಬದ್ರಿನಾಥ ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ, ಅರವಿಂದ್ ಕಲಗುಜ್ಜಿ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಕಾರವಾರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ನಿತ್ಯಾನಂದ ಪಂಡಿತ್ ಸಿ ಪಿ ಐ ರವರ ನೇತೃತ್ವದಲ್ಲಿ ಚಿತ್ತಾಕುಲ ಠಾಣೆಯ, ಪ್ರವೀಣ್ ಕುಮಾರ್ ಕಾ&ಸು, ಕಲ್ಪನಾ ಪಿ.ಎಸ್.ಐ ಅಪರಾಧ ವಿಭಾಗ , ವಿಶೇಷವಾಗಿ ಸಿಬ್ಬಂದಿಯವರಾದ ಅರುಣ್ ಕಾಂಬ್ಳೆ, ರಮಾನಾಥ ನಾಯ್ಕ್, ರಾಜೇಶ ನಾಯ್ಕ್, ಮಹಾದೇವ ಸಿದ್ದಿ ಇವರುಗಳ ತಂಡ 28 ವರ್ಷಗಳಿಂದ ಪ ತ್ತೆಯಾಗದ ಆಸಾಮಿ ಯನ್ನ ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುತ್ತಾರೆ. ಪತ್ತೆ ಕಾರ್ಯ ಕೈಗೊಂಡ ತಂಡದಲ್ಲಿದ್ದ ಪೊಲೀಸ್ ಅಧಿಕಾರಿ/ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್