ಕೊಡಗು ಜಿಲ್ಲಾ ಪೊಲೀಸ್ ಘಟಕದ ಶ್ವಾನದಳ ವಿಭಾಗದಲ್ಲಿ “LEO” “ಲಿಯೋ” ಎಂಬ ಹೆಸರಿನ ಶ್ವಾನವು ದಿನಾಂಕ: 26-2-2013 ರಿಂದ ಅಪರಾಧ ಕೃತ್ಯ ಎಸಗಿದ ಅಪರಾದಿಗಳ ಪತ್ತೆ ಕರ್ತವ್ಯ ನಿರ್ವಹಿಸಿರುತ್ತದೆ. ಮನಮೋಹನ ಬಿ.ಪಿ, ಎಹೆಚ್‌ಸಿ-01 ಮತ್ತು ಶಿವ ಎಂ.ಆರ್, ಎಹೆಚ್‌ಸಿ-118 ರವರು ಗಳು ಲಿಯೋನ ಹ್ಯಾಂಡ್ಲರ್ ಗಳಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
ಲಿಯೋ ತನ್ನ ಸೇವಾ ಅವಧಿಯಲ್ಲಿ ಪೊಲೀಸ್ ಇಲಾಖೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದು, ವಿವಿಧ ಪೊಲೀಸ್ ಠಾಣೆಯಲ್ಲಿ ವರದಿಯಾದ ತುಂಬಾ ಕ್ಲಿಷ್ಟಕರವಾದ ಪ್ರಕರಣಗಳ ಅಪರಾಧಿಗಳನ್ನು ಪತ್ತೆ ಹಚ್ಚಿ ಅಪರಾಧಿಗಳನ್ನು ಬಂದಿಸುವಲ್ಲಿ ಸಹಕಾರಿಯಾಗಿರುತ್ತದೆ.
ಲಿಯೋ 2013 ನೇ ಸಾಲಿನಿಂದ 10 ವರ್ಷಗಳ ಸೇವೆ ಅವಧಿಯಲ್ಲಿನ ಅತ್ಯುತ್ತಮ ಸೇವಾ ವಿವರ ಈ ಕೆಳಗಿನಂತಿದೆ;
382 ಅಪರಾಧ ಪ್ರಕರಣ ಪತ್ತೆ ಕಾರ್ಯದಲ್ಲಿ ಭಾಗಿಯಾಗಿರುತ್ತದೆ.
46 ಅಪರಾಧ ಕೃತ್ಯ ಎಸಗಿದ ಅಪರಾಧಿಗಳ ಪತ್ತೆ ಮಾಡಿರುತ್ತದೆ.
22 ಪ್ರಕರಣಗಳಲ್ಲಿ ಅಪರಾಧಿಗಳ ಸುಳಿವು ನೀಡಿರುತ್ತದೆ.
2018 ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ನಡೆದ ಭೂಕಸಿತದಲ್ಲಿ ಕಾಣೆಯಾದ ಮೃತ ದೇಹಗಳನ್ನು ಪತ್ತೆ ಮಾಡಿರುತ್ತದೆ..
ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 03 ಬಾರಿ ಹಾಗೂ ವಲಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 04 ಬಹುಮಾನವನ್ನು ಪಡೆದಿರುತ್ತದೆ.
ಚೆಕ್‌ಪೋಸ್ಟ್ ಗಳಲ್ಲಿ ನಿಷೇಧಿತ ಮಾದಕ ವಸ್ತುಗಳ ಸಾಗಾಟವನ್ನು ಪತ್ತೆ ಮಾಡಿರುತ್ತದೆ.
ಲಿಯೋ ಕೊಡಗು ಪೊಲೀಸ್ ಘಟಕದಲ್ಲಿ ಒಟ್ಟು 10 ವರ್ಷ 9 ತಿಂಗಳ ಕಾಲ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ ದಿನಾಂಕ: 17-11-2023 ರಂದು ಸೇವೆಯಿಂದ ನಿವೃತ್ತಿಯನ್ನು ಹೊಂದಿರುತ್ತದೆ.
ದಿನಾಂಕ: 21-12-2023 ರಂದು ಅನಾರೋಗ್ಯದಿಂದ ಲಿಯೋ ಮೃತ ಪಟ್ಟಿರುತ್ತದೆ. ಲಿಯೋ ನ ಕರ್ತವ್ಯದ ಅವಧಿಯಲ್ಲಿನ ಅತ್ಯುತ್ತಮ ಸೇವೆಯನ್ನು ಸ್ಮರಿಸುತ್ತಾ, ಕೊಡಗು ಜಿಲ್ಲಾ ಪೊಲೀಸ್‌ನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಪರವಾಗಿ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ಕೆ. ರಾಮರಾಜನ್, ಐಪಿಎಸ್, ಕೊಡಗು ಜಿಲ್ಲೆ ರವರು ಲಿಯೋಗೆ ಸಕಲ ಇಲಾಖಾ ಗೌರವಗಳೊಂದಿಗೆ ಅಂತಿಮ ವಂದನೆಯನ್ನು ಸಲ್ಲಿಸಿರುತ್ತಾರೆ. ಈ ಸಂದರ್ಭ ಇಲಾಖೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.