ಪಿರಾದಿಯು ಆನ್‌ಲೈನ್ ಇ-ಕಾಮರ್ಸ್ (FLIPKART, AMAZON, MEESHO AJIO) ಕಂಪನಿಗಳಿಂದ ಬರುವ ಆರ್ಡ್ ಅನ್ನು ಪಡೆದು ಗ್ರಾಹಕರಿಗೆ ವಾಪಸ್ಸು ಡಿಲೆವರಿ ಮಾಡುವ ಬ್ಯುಸಿನೆಸ್ ಮಾಡಿಕೊಂಡಿರುವಾಗ ದೂರುದಾರರಿಗೆ ತಿಳಿಯದ ಹಾಗೆ ಕಂಪನಿಯ ಡೇಟಾವನ್ನು ಕಳವು ಮಾಡಿ ದುರ್ಬಳಕೆ ಮಾಡಿಕೊಂಡು ಕ್ಯಾಶ್ ಆನ್ ಡೆಲವರಿ ಅರ್ಡ‌್ರನ್ನು ಗುರಿಯಾಗಿಸಿಕೊಂಡು ಗ್ರಾಹಕರಿಗೆ ಅಸಲಿ ವಸ್ತುಗಳ ಬದಲಾಗಿ ನಕಲಿ ವಸ್ತುಗಳ ಫೇಕ್ ಶೀಪ್‌ಮೇಟ್ ಕಳುಹಿಸಿ, ಗ್ರಾಹಕರಿಂದ ಹಣವನ್ನು ಪಡೆದುಕೊಂಡು ದಿನಾಂಕ:30-06-2021 ರಿಂದ ಇಲ್ಲಿಯವರೆಗೂ ಸುಮಾರು 10 ಲಕ್ಷ ರೂ. ಹಣ ನಷ್ಟವಾಗಿದೆಂದು ನೀಡಿದ ದೂರಿನ್ವಯ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಈ ಪ್ರಕರಣದಲ್ಲಿ ಆರೋಪಿಗಳು ಗ್ರಾಹಕರಿಗೆ ಕಳುಹಿಸುತ್ತಿದ್ದ ನಕಲಿ ಶಿಪ್‌ಮೆಟ್‌ನಲ್ಲಿರುವ ಎಡ್ವ (ಎ.ವೇ.ಬಿಲ್) ನಂಬರ್, ಬ್ಯೂಡಾರ್ಟ್ ಕೋರಿಯರನ ಸಬ್‌ಪ ಆದ ನಿಂಬಸ್ ಪೊಸ್ಟ್ ರವರ ಮಾಹಿತಿ, ಕೆವೈಸಿ ಮತ್ತು ಬ್ಯಾಂಕ್ ಖಾತೆಯ ಮಾಹಿತಿ ಆಧಾರದ ಮೇಲೆ ಮುಂಬೈ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಿಂದ ಒಟ್ಟು 21 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ವಶದಿಂದ ಕೃತ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದ 11 ಮೊಬೈಲ್ ಫೋನ್‌ಗಳು, 03-ಲ್ಯಾಪ್ ಟಾಪ್ ಮತ್ತು ಹಾರ್ಡ್‌ಡಿಸ್ಕ್ ಅನ್ನು ವಶಕ್ಕೆ ಪಡೆದು ಆರೋಪಿಗಳಲ್ಲಿ ಖಾತೆಯಲ್ಲಿ 19,45,135/- ರೂ. ಡೆಬಿಟ್ ಫ್ರೀಜ್ ಮಾಡಲಾಗಿರುತ್ತದೆ. ಹಾಗೂ ಆರೋಪಿಗಳಿಂದ 7,50,000/- ರೂ ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪಿದ್ಯಾದಿಯ ದತ್ತಾಂಶವನ್ನು ಮಾರಾಟ ಮಾಡಿ ಹಣ ಸಂಪಾದನೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಗಳು ಕ್ಯಾಶ್ ಆನ್ ಡೆಲವರಿ ಆರ್ಡರ್ ಮಾಡುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಬುಕಿಂಗ್ ಮಾಡಿದ ವಸ್ತುಗಳ ಬದಲಾಗಿ ನಕಲಿ ವಸ್ತುಗಳನ್ನು ನಿಂಜೂಸ್ ಪೇಸ್ಟ್, ಎಕ್ಸ್‌ಪೋಸ್‌ಬಿ, ಷಡೋಪಾಕ್ಸ್, ಬ್ಲೂಡಾರ್ಟ್, ಓನ್ ಡೇ ಕೋರಿಯರ್ ಎಂಬಿತ್ಯಾದಿ ಸರ್ವಿಸ್‌ಗಳನ್ನು ಬಳಸಿಕೊಂಡು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಿ ಮೋಸ ಮಾಡುತ್ತಿರುತ್ತಾರೆ. 02 ದಿನಗಳ ನಂತರ ನೈಜ ವಸ್ತುಗಳು ಗ್ರಾಹಕರ ಕೈ ಸೇರಿದಾಗ ನಕಲಿ ವಸ್ತುವನ್ನು ಇ-ಕಾಮರ್ಸ್ ಪೋರ್ಟಲ್ ಮುಖಾಂತರ ವಾಪಸ್ಸು ಕಳುಹಿಸಿ ಪಿರಾದಿಗೆ ಸುಮಾರು 70,00000/- ರೂ ನಷ್ಟ ಉಂಟಾಗುವಂತೆ ಮಾಡಿರುತ್ತಾರೆ.
ಈ ಪ್ರಕರಣದಲ್ಲಿ ಶ್ರೀ ಶಿವ ಪ್ರಕಾಶ್, ದೇವರಾಜು ಐ.ಪಿ.ಎಸ್., ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಕೃಷ್ಣಮೂರ್ತಿ ಹೆಚ್. ಎಸಿಪಿ ಮಲ್ಲೇಶ್ವರಂ ಉಪ ವಿಭಾಗ ಮತ್ತು ಶ್ರೀಮತಿ ಕಾತ್ಯಾಯಿನಿ ಆಳ್ವ, ಪೊಲೀಸ್ ಇನ್ಸ್ ಪೆಕ್ಟರ್, ಉತ್ತರ ವಿಭಾಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದ ತಂಡ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ರವರು ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ. ಎನ್.ಸತೀಶ್ ಕುಮಾರ್ ರವರು ಶ್ಲಾಘಿಸಿರುತ್ತಾರೆ.