ಆಗ್ನೇಯ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ .ಶ್ರೀನಾಥ್ ಮಹಾದೇವ್ ಜೋಶಿ ರವರ ಮಾರ್ಗದರ್ಶನದಲ್ಲಿ ಹಾಗೂ ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಸುಧೀರ್ ಎಂ ಹೆಗ್ಡೆ ರವರ ನೇತೃತ್ವದಲ್ಲಿ ಆಡುಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ. ಪ್ರಶಾಂತ್ ಎಸ್ .ರವರು ತಮ್ಮ ಠಾಣೆಯ ಪಿ.ಎಸ್. ಐ. ಬಸವರಾಜ್ ಹಾಗೂ ಸಿಬ್ಬಂದಿಗಳೊಂದಿಗೆ ತಂಡವನ್ನು ರಚಿಸಿಕೊಂಡು ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾವನ್ನು ಮತ್ತು HASH ಆಯಿಲ್ ಅನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ .
2ಲಕ್ಷ ಬೆಲೆಬಾಳುವ 5ಕೇಜಿ 100 ಗ್ರಾಂ ಮಾದಕ ವಸ್ತು ಗಾಂಜಾ ,25 ಲಕ್ಷ ಬೆಲೆ ಬಾಳುವ 549ಗ್ರಾಂ ತೂಕದ ನಿಷೇಧಿತ Hash Oil.1ಓಪೋ ಮೊಬೈಲ್ ಫೋನ್ ,1200/- ರೂ ಗಳನ್ನು ಅಮಾನತು ಪಡಿಸಿಕೊಂಡಿರುತ್ತಾರೆ .
ಗೆ ಒಟ್ಟು ಇಪ್ಪತ್ತು ಲಕ್ಷ₹ಬೆಲೆಬಾಳುವ ಮಾಲುಗಳನ್ನು ವಶಕ್ಕೆ ಪಡಿಸಿಕೊಂಡು ಈ ಪ್ರಕರಣವನ್ನು ಬೇದಿಸುವಲ್ಲಿ ಆಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ . ಆಡುಗೋಡಿ ಪೊಲೀಸರು ಕಾರ್ಯಾಚರಣೆ ಬಗ್ಗೆ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ .ಕಮಲ್ ಪಂತ್ IPS ರವರು
ಪ್ರಶಂಸಿಸಿರುತ್ತಾರೆ .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,