ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ವ್ಯಕ್ತಿಯ ಬಂಧನ .
ದಿನಾಂಕ 27-06-2022 ರಂದು ಬತ್ತಿ ದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಹುಳಿಮಾವು ಪೊಲೀಸ್ ಠಾಣೆಯ ಸರಹದ್ದಿನ ಬಸವನಪುರ ಗ್ರಾಮದ ಟಿ .ಜಾನ್ ಕಾಲೇಜಿನ ಬಳಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶ ರಾಜ್ಯದ ಬಿ ಇ ಡಿ ಸರ್ಕಲ್ ,ದಾಡಿ ಗಡಪ್ಪ ಚೇರೂರು ಪೋಸ್ಟ್ ವಿಜಯವಾಡ ನಿವಾಸಿ ಯನ್ನು ಬಂಧಿಸಿ ವಶಕ್ಕೆ ಪಡೆದು ತಪಾಸಣೆ ಮಾಡಲಾಗಿ ಈತನ ವಶದಲ್ಲೇ ಉಂಟು 25 ಕೇಜಿ ತೂಕದ ಮಾದಕ ವಸ್ತು ಗಾಂಜಾ ದೊರೆತಿದ್ದು ಈತನ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದರು .
ಆರೋಪಿಯನ್ನು ಈ ಪ್ರಕರಣದಲ್ಲಿ ದಸ್ತಗಿರಿ ಪಡಿಸಿ ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ಆರೋಪಿಯು ಮೂಲತಃ ಆಂಧ್ರಪ್ರದೇಶ ರಾಜ್ಯದ ವಿಜಯವಾಡಾ ಜಿಲ್ಲೆಯ ವಾಸಿಯಾಗಿತ್ತು ಆರೋಪಿಯ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಾದಕ ವಸ್ತು ಗಾಂಜಾ ಅನ್ನೋ 1ಕೆ ಜಿ ಗೆ ₹5000/- ನಂತೆ ಖರೀದಿಸಿ ಬೆಂಗಳೂರಿಗೆ ತಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಎಲೆಕ್ಟ್ರಾನಿಕ್ ಸಿಟಿ ಹೊಸೂರು ರಸ್ತೆ ಬೀದಿ ಬೀದಿಯ ವಿದ್ಯಾರ್ಥಿಗಳಿಗೆ ಮಾದಕ ವಸ್ತುವನ್ನು ಮಾರಾಟ ಮಾಡಿ ಹಣ ಮಾಡುತ್ತಿದ್ದ ಎಂದು ತಿಳಿಸಿರುತ್ತಾರೆ.
ಮಾನ್ಯ ಶ್ರೀ. ಸಿ. ಕೆ ಬಾಬಾ ಉಪ ಪೊಲೀಸ್ ಆಯುಕ್ತರು ಆಗ್ನೇಯ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ. ಎ .ಬಿ ಸುಧಾಕರ್ ಸಹಾಯಕ ಪೊಲೀಸ್ ಆಯುಕ್ತರು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ ರವರ ನೇತೃತ್ವದಲ್ಲಿ ಹುಳಿಮಾವು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ .ಚಂದ್ರಕಾಂತ್ ಎಲ್ .ಟಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ಶ್ರೀ. ವೀರಣ್ಣ ಪಿ ಮತ್ತು ಶ್ರೀ. ಮಹೇಶ್ ಹಾಗೂ ಸಿಬ್ಬಂದಿಯವರಾದ ಶ್ರೀ .ಸತೀಶ್ ಕುಮಾರ್, ಶ್ರೀ. ಜಯಕುಮಾರ್, ಶ್ರೀ.ಮಹಾವೀರ್ ಶ್ರೀ. ಕೇದಾರಲಿಂಗ ಮತ್ತು ಶ್ರೀ. ಚೌಡ ಲಿಂಗಯ್ಯ ರವರು ಆರೋಪಿಯನ್ನು ಬಂಧಿಸಿ ₹10,00,000/- ಬೆಲೆ ಬಾಳುವ 25 ಕೆಜಿ ತೂಕದ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಂಡು ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ