ಅರಸೀಕೆರೆ ನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಇತ್ತೀಚೆಗೆ ಮೋಟಾರ್ ಬೈಕ್ ಗಳು ಕಳ್ಳತನವಾಗಿ ಈ ಸಂಬಂಧ ಕಳವು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಇದರ ಸೂರಕ್ಷತೆಯನ್ನು ಅರಿತ ಹಾಸನ ಜಿಲ್ಲೆಯ ಮಾನ್ಯ ಪೊಲೀಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ. ಆರ್ ಶ್ರೀನಿವಾಸ್ ಗೌಡ ಐಪಿಎಸ್ ರವರು ಕಳವಿಗೆ ಸಂಬಂಧಿಸಿದ ಆರೋಪಿಗಳು ಮತ್ತು ಮೋಟಾರ್ ಬೈಕ್ ಗಳ ಪತ್ತೆ ಬಗ್ಗೆ ನುರಿತ ಸಿಬ್ಬಂದಿಗಳ ತಂಡವನ್ನು ರಚಿಸಿ ಶ್ರೀಮತಿ. ನಂದಿನಿ ಮಾನ್ಯ ಅಪರ ಅಧ್ಯಕ್ಷರು ಹಾಸನ ಜಿಲ್ಲಾ ಹಾಸನರವರು ಶ್ರೀ ಎಲ್ ನಾಗೇಶ್ ಅರಸೀಕೆರೆ ಉಪವಿಭಾಗದ ಡಿವೈಎಸ್ ಪಿ ರವರು \’ಶ್ರೀ .ಪಿ ಪಿ ಸೋಮೇಗೌಡ ಪೋಲಿಸ್ ಇನ್ಸ್ಪೆಕ್ಟರ್ ನಗರ ಪೊಲೀಸ್ ಠಾಣೆ ಅರಸೀಕೆರೆ ಅವರ ಮಾರ್ಗದರ್ಶನದಲ್ಲಿ ಶ್ರೀ .ಟಿ ತಿಮ್ಮಯ್ಯ ಪಿ ಎಸ್ ಐ ಅರಸೀಕೆರೆ ನಗರ ಠಾಣೆ ಮತ್ತು ಅರಸೀಕೆರೆ ನಗರ ಠಾಣೆಯ ಸಿಬ್ಬಂದಿ ಯವರಾದ ಮಂಜೇಗೌಡ, ರಂಗಸ್ವಾಮಿ, ರಘು, ಕುಮಾರ್, ಸಂಗಪ್ಪ, ರಮೇಶ್, ಶುಭಾ ಇಲಾಖೆ ಜೀಪ್ ಚಾಲಕರಾದ ನಾಗರಾಜುರವರು ಕಾರ್ಯಪ್ರವೃತ್ತರಾಗಿ ಶ್ರೀ. ಎಸ್ ಜಿ ಪಾಟೀಲ್ ಬೇಲೂರು ಪಿ ಎಸ್ ಐ ಮತ್ತು ಪೀರ್ ಖಾನ್ ಜಿಲ್ಲಾ ಪೊಲೀಸ್ ಕಚೇರಿ ಅಸಾನೊ ಇವರ ತಾಂತ್ರಿಕ ನೆರವಿನಿಂದ ಅರಸೀಕೆರೆ ನಗರ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಆರ್ ಆರ್ ಹೋಟೆಲ್ ಬಳಿ ಆಸಾಮಿ ಮೋಟಾರ್ ಬೈಕನ್ನು ನಿಲ್ಲಿಸಿಕೊಂಡು ಸ್ಟಾರ್ಟ್ ಮಾಡಲು ಆಗದೆ ಅನುಮಾನ ಬರುವಂತೆ ವರ್ತಿಸುತ್ತಿದ್ದು ಮೇಲ್ಕೊಂಡ ಸಿಬ್ಬಂದಿಗಳು ಆತನನ್ನು ಮೋಟಾರ್ ಬೈಕ್ ಸಮೇತ ಹಿಡಿದುಕೊಂಡಿರುತ್ತಾರೆ . ಒಟ್ಟು ಸುಮಾರು 10 ಲಕ್ಷ ಮೌಲ್ಯದ 2 ಕಾರು, 1 ಆಟೋ , 5 ಬೈಕುಗಳನ್ನು ವಶಪಡಿಸಿಕೊಂಡಿರುತ್ತಾರೆ
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,