ಸಾರ್ವಜನಿಕರಿಗೆ ಗಾಂಜಾ ಹಾಗೂ ಎಂ ಡಿ ಎಂ ಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ವಿದೇಶಿ ಮಹಿಳೆಯನ್ನು ದಿನಾಂಕ:-08/07/2023 ರಂದು ಕೊತ್ತನೂರು ಪೊಲೀಸರು ದಾಳಿ ಕ್ರಮ ಜರುಗಿಸಿ ಬಂದಿಸಿರುತ್ತಾರೆ. ಬಂಧಿತ ಮಹಿಳೆಯಿಂದ, ಸುಮಾರು 1.35 ಲಕ್ಷ ಮೌಲ್ಯದ 2.7 ಕೆಜಿ ಮಾದಕ ವಸ್ತು ಗಾಂಜಾ ಹಾಗೂ 2.00 ಲಕ್ಷ ಮೌಲ್ಯದ 105 ಗ್ರಾಂ ಎಂ.ಡಿ.ಎಂ.ಎ ಸೇರಿ ಒಟ್ಟು 3.45 ಲಕ್ಷ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮಹಿಳೆಯನ್ನು ವಿಚಾರ ಮಾಡಲಾಗಿ, ಆಕೆಯ ವೀಸಾ ಅವಧಿ ಮೀರಿ ಭಾರತದಲ್ಲಿ ವಾಸವಾಗಿರುವುದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿರುತ್ತದೆ. ಬಂಧಿತೆಯ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಹಾಗೂ ಫಾರಿನರ್ಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ
ಪ್ರಗತಿಯಲ್ಲಿರುತ್ತದೆ.
ದಾಳಿಯನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಲಕ್ಷ್ಮೀಪ್ರಸಾದ್, ರವರ ಮಾರ್ಗದರ್ಶನದಲ್ಲಿ, ಸಂಪಿಗೆಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಟಿ.ರಂಗಪ್ಪ ರವರ ನೇತೃತ್ವದಲ್ಲಿ ಕೊತ್ತನೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀ, ಅಶ್ವಥ್ ನಾರಾಯಣ ಸ್ವಾಮಿ, ಜಿ.ಎನ್ ಹಾಗೂ ಸಿಬ್ಬಂದಿಯವರ ತಂಡವು ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ ಪೊಲೀಸ್
ಆಯುಕ್ತರಾದ ಶ್ರೀ. ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪೂರ್ವ ಶ್ರೀ.ರಮನ್‌ಗುಪ್ತಾ ರವರು
ಪ್ರಶಂಸಿರುತ್ತಾರೆ.