ದಿನಾಂಕ: 13.07.2022 ರಂದು ಡಾ|| ಕೆ. ಧರಣಿದೇವಿ, ಮಾನ್ಯ ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್. ಮತ್ತು ಶ್ರೀ. ಪಿ.ಮುರಳೀಧರ, ಡಿ.ವೈ.ಎಸ್.ಪಿ, ಕೆಜಿಎಫ್ ರವರ ಮಾರ್ಗದರ್ಶನದಲ್ಲಿ ಶ್ರೀ. ಆರ್.ವೆಂಕಟೇಶ, ಸಿಪಿಐ, ಬೇತಮಂಗಲ ವೃತ್ತ, ಕೆ.ಜಿ.ಎಫ್ ರವರಿಗೆ ಭಾತ್ಮಿದಾರರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ 5:00 ಗಂಟೆಗೆ ಸಿಬ್ಬಂದಿಯವರಾದ ಶ್ರೀ.ಲಕ್ಷ್ಮೀನಾರಾಯಣ ಎ.ಎಸ್.ಐ, ಶ್ರೀ.ಸುರೇಶ್ ಸಿ.ಹೆಚ್.ಸಿ, ಶ್ರಿ.ಸಿದ್ದರಾಮಪಾಟೀಲ್ ಸಿಪಿಸಿ, ಶ್ರೀ.ರಮೇಶ ಈ ಜಂಬಗಿ ಸಿಪಿಸಿ, ಶ್ರೀ.ಸುಧಾಕರ್ ಸಿ.ಪಿ.ಸಿ ಮತ್ತು ಶ್ರೀ ಕೇಶವಮೂರ್ತಿ ಎ.ಹೆಚ್.ಸಿ ರವರೊಂದಿಗೆ ವಿ.ಕೋಟೆ-ಕುಪ್ಪಂ ಮುಖ್ಯ ರಸ್ತೆಯ ರಾಜಪೇಟೆರಸ್ತೆ (ಜೆ.ಕೆಪುರಂ) ರಾಮಕುಪ್ಪಂ ಸರ್ಕಲ್ನಲ್ಲಿ ಜೀಪನ್ನು ನಿಲ್ಲಿಸಿಕೊಂಡಿದ್ದಾಗ, ವಿಕೋಟೆ ಕಡೆಯಿಂದ-ಕುಪ್ಪಂ ಕಡೆಗೆ ಭಾರತ್ ಬೆನ್ಜ್ ಲಾರಿ ಸಂಖ್ಯೆ ಕೆ.ಎ 55, ಎ 0851 ಹಾಗೂ ಅಶೋಕ ಲೈಲ್ಯಾಂಡ್ ಲಾರಿ ಸಂಖ್ಯೆ ಕೆ.ಎಲ್ 09, ಆರ್-7900 ವಾಹನಗಳು ಬಂದಿದ್ದು, ಸದರಿ ವಾಹನಗಳನ್ನು ತಡೆದು ಪರಿಶೀಲಿಸಲಾಗಿ ಭಾರತ್ ಬೆನ್ಜ್ ಲಾರಿಯಲ್ಲಿ 31 ಎಮ್ಮೆಗಳನ್ನು ಹಾಗೂ ಅಶೋಕ ಲೈಲ್ಯಾಂಡ್ ಲಾರಿಯಲ್ಲಿ 30 ಎತ್ತುಗಳನ್ನು ಯಾವುದೇ ಸೂಕ್ತ ಪರವಾನಗಿ ಪಡೆದುಕೊಳ್ಳದೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದು ಸದರಿ ಎಮ್ಮೆ ಹಾಗೂ ಎತ್ತುಗಳು, 02 ಲಾರಿಗಳು ಹಾಗೂ 06 ಜನ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.
ಪೊಲೀಸ್ ವಶಕ್ಕೆ ಪಡೆದ 31 ಎಮ್ಮೆಗಳನ್ನು ಹಾಗೂ 30 ಎತ್ತುಗಳನ್ನು ಸುರಕ್ಷತೆ ಹಾಗೂ ಪೋಷಣೆ ಸಲುವಾಗಿ ಅಲ್ಲಿಕುಂಟೆ ಕದಿರೇನಹಳ್ಳಿ ಗ್ರಾಮದ ಜೈನ್ ಗೋಶಾಲೆಯ ವಶಕ್ಕೆ ಒಪ್ಪಿಸಿರುತ್ತೆ. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ.