ದಿನಾಂಕ 02/10/2022 ರಂದು ಬೆಳಿಗ್ಗೆ ಸಮಯದಲ್ಲಿ ಡಾ || ಸುಮನ ಪೇನ್ನೇಕರ ಮಾನ್ಯ ಪೊಲೀಸ ಅಧೀಕ್ಷಕರು ಕಾರವಾರ ರವರಿಗೆ ಮಾಹಿತಿ ಬಂದ ಮೇರೆಗೆ ಮಾನ್ಯ ಎಸ್.ಪಿ. ಕಾರವಾರ ಹಾಗೂ ಶ್ರೀ ಎಸ್ ಬದರಿನಾಥ ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು , ಕಾರವಾರ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ವಿಶೇಷ ವಿಭಾಗದ ಶ್ರೀ ಪ್ರೇಮನಗೌಡ ಪಾಟೀಲ್ ಪಿ.ಎಸ್.ಐ. ಶ್ರೀ ಯಲ್ಲಾಲಿಂಗ ಕುನ್ನೂರ, ಪಿ.ಎಸ್.ಐ. ರಾಮನಗರ ಪೊಲೀಸ್ ಠಾಣೆ, ಎಚ್.ಸಿ – ರಾಘವೇಂದ್ರ ಜಿ, ಪಿ.ಸಿ. ಭಗವಾನ ಗಾಂವಕರ, ಸಂತೋಷ್ ಕುಮಾರ್, ವೀರೇಶ ನಾಯಕ ತಂಡವು ನಿಖರ ಮಾಹಿತಿಯಂತೆ ದಿನಾಂಕ 2-10-2022 ರಂದು ಬೆಳಿಗ್ಗೆ 05-10 ಗಂಟೆಯ ಸುಮಾರಿಗೆ ಅನಮೋಡ ಅಬಕಾರಿ ಚೆಕ್ ಮೊಸ್ಟ ಬಳಿ ಬಂದು 1)ಮಹಿಂದ್ರಾ ಬುಲೆರೋ ಪಿಕ ಅಫ್ ವಾಹನ, ಸಂಖ್ಯೆ : ಕೆ.ಎ -31 / 6920, 2)ಮಹಿಂದ್ರ ಬುಲೆರೋ ಫಿಕ ಇಾರ್ ವಾಹನ ಸಂಖ್ಯೆ : ಕೆ.ಎ -22 / ಡಿ 0824)ಟಾಟಾ ಕಂಪನಿಯ 407 ವಾಹನ ಸಂಖ್ಯೆ . ಜಿ ಎ 08- ವಿ 0855 ಮೂಲಕ ದನದ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾಯುತ್ತಿರುವಾಗ 05-25 ಗಂಟೆಯ ಸಮಯಕ್ಕೆ ಬಂದ ಈ ವಾಹನವನ್ನು ಚೆಕ್ ಮಾಡಲು ಮೂರು ವಾಹನದಲ್ಲಿ 3 ಲಕ್ಷ ಮೌಲ್ಯದ ಒಟ್ಟು 2200 ಕೆ ಜಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ದನದ ಮಾಂಸ, ಸಾಗಾಟಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಿದ್ದು ಹಾಗೂ ಆರೋಪಿತರಾದ 1) ಸಾದಿಕ್ ತಂದೆ ಅಬ್ದುಲ ಖಾದರ ಅತ್ತಾರ ಅಳ್ನಾವರ 2 ) ರಾಜೆ ಜಂಗ್ಲಿ ಸಾಬ ಹರಗಿ ಸಾ: ಖಾನಾಪುರ 3 )ಇಲಿಯಾಸ್ ತಂದೆ ಹಜರತ ಬೀಲಾಲ ಸಾ : ಅಳ್ನಾವರ 4) ದಾವಲ ಮಲ್ಲಿಕ್ ತಂದೆ ಮುಕ್ತಾರ್ ಅಹ್ಮದ ಮನೂರಕರ, 5) ಶಾಹಿದ್ ಗುಡ್ಡುಸಾಬ ಶಿಡೋಡಿ ಸಾ : ಖಾನಾಪುರ ಆರೋಪಿತರಿಗೆ ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡು ಈ ಬಗ್ಗೆ ರಾಮನಗರ ಪೊಲೀಸ್ ರಾಣಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ನಾನೂ ಶ್ಲಾಘನೆ ವ್ಯಕ್ತ ಪಡಿಸಿರುತ್ತೇನೆ.