ದಿನಾಂಕ: 03/07/223 ರಂದು ಸಂಜೆ 5 ಗoಟೆಯ ಸಮಯದಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ಸರಹದ್ದಿನ, ಎಸ್.ಎಸ್.ಎಂ ಸ್ಕೂಲ್ ಹತ್ತಿರದ ಬಿ.ಬಿ.ಎಂ.ಪಿ ಆಟದ ಮೈದಾನ ಬಳಿ ಯಾರೋ ಒಬ್ಬ ಆಸಾಮಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಯುವಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾನೆಂದು ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ, ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸದರಿ ವ್ಯಕ್ತಿ ಮೇಲೆ ದಾಳಿ ಮಾಡಿ ಒಬ್ಬ ಆಸಾಮಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ನಂತರ ಆತನ ವಶದಲ್ಲಿ ಇದ್ದ 1 ಕೆ.ಜಿ. 868 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ಹಾಗೂ ರೂ.2100- ನಗದು ಹಣವನ್ನು ಅಮಾನತುಪಡಿಸಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿ ಆತನು ಬೆಂಗಳೂರು ನಗರ, ಎ.ಜಿ.ಎಸ್ ಲೇಔಟ್, ಟಾಟಾ ಮೋಟರ್ ಅಪಾರ್ಟ್‌ಮೆಂಟ್ ಹತ್ತಿರ, ಹನುಮಗಿರಿ ಬೆಟ್ಟದಲ್ಲಿರುವ ಮುನೇಶ್ವರ ಟೆಂಪಲ್ ಪಕ್ಕದ ಪಾಳುಬಿದ್ದ ಕಟ್ಟಡದಲ್ಲಿ ಆರೋಪಿಯು ಅಕ್ರಮವಾಗಿ ಅಡಗಿಸಿಟ್ಟಿದ್ದ 19ಕೆಜಿ ಗಾಂಜಾ ಅಮಾನತ್ತುಪಡಿಸಿಕೊಂಡಿರುತ್ತದೆ.
ಪ್ರಕರಣದ ಯಶಸ್ವಿ ಕಾರ್ಯಾಚರಣೆಯನ್ನು ಬೆಂಗಳೂರು ನಗರ ದಕ್ಷಿಣ ವಿಭಾಗದ ಮಾನ್ಯ
ಉಪ ಪೊಲೀಸ್ ಕಮೀಷನರ್ ಶ್ರೀ.ಪಿ.ಕೃಷ್ಣಕಾಂತ್, ರವರ ಮಾರ್ಗದರ್ಶನದಲ್ಲಿ ವಿ.ವಿ.ಪುರಂ ಉಪ-
ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ. ಜಿ.ನಾಗರಾಜ ರವರ ನೇತೃತ್ವದಲ್ಲಿ, ಸಿ.ಕೆ.ಅಚ್ಚುಕಟ್ಟು
ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀ, ಉದಯರವಿ ಹಾಗೂ ಸಿಬ್ಬಂದಿಯವರು ಪಕರಣವನ್ನು ಭೇದಿಸುವಲ್ಲಿ
ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ಎಸ್.ಸತೀಶ್ ಕುಮಾರ್ ರವರು ಪ್ರಶಂಸಿರುತ್ತಾರೆ.
ವರದಿ : ಆಂಟೋನಿ ಬೇಗೂರು