ದಿನಾಂಕ 26/07/2023 ರಂದು ಹೊನ್ನಾಳಿ ಪೊಲೀಸ್ ಠಾಣೆಯ ಶ್ರೀ ಸಿದ್ದಪ್ಪ ಪಿ.ಎಸ್.ಐ ರವರು ತಮ್ಮ ಠಾಣೆಯ ಸಿಬ್ಬಂದಿಯವರೊಂದಿಗೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾನ್ವಿಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಯಾರೋ 03 ಜನ ಆಸಾಮಿಗಳು ಗಂಧದ ಮರದ ತುಂಡುಗಳನ್ನು ಕಳ್ಳತನ ಮಾಡಿಕೊಂಡು ಮಾರಾಟ ಮಾಡಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಅಂತ ಪಿ.ಎಸ್.ಐ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ ಆರ್.ಬಿ.ಬಸರಗಿ ರವರ ಹಾಗೂ ಡಾ. ಸಂತೋಷ್ ಕೆ.ಎಂ., ಪೊಲೀಸ್ ಉಪಾಧೀಕ್ಷಕರು ಚನ್ನಗಿರಿ ಉಪವಿಭಾಗ ಇವರ ಹಾಗೂ ಶ್ರೀ ಸಿದ್ದೇಗೌಡ ಹೆಚ್.ಎಂ ಪೊಲೀಸ್ ನಿರೀಕ್ಷಕರು, ಹೊನ್ನಾಳಿ ಪೊಲೀಸ್ ಠಾಣೆ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರ ಹಾಗು ಪಂಚರೊಂದಿಗೆ ದಾಳಿ ಮಾಡಿ ಕುಳಗಟ್ಟೆ ಕ್ರಾಸ್ ಬಳಿ ಅಕ್ರಮವಾಗಿ ಸಾಗಾಣಿಗೆ ಮಾಡುತ್ತಿದ್ದ ಸುಮಾರು 42,000/- ರೂ ಮೌಲ್ಯದ 21 ಕೆಜಿ ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ
1) ಸೈಯದ್ ಅಲ್ಲಾಭಕ್ಷಿ ಬಿನ್ ಚಮನ್ ಸಾಬ್, 35 ವರ್ಷ,
2) ಮಹಮದ್ ರಫೀಕ್ ಬಿನ್ ಖಾಸೀಂ ಸಾಬ್, 30 ವರ್ಷ,
3) ನೂರುಲ್ಲಾ ಬಿನ್ ಬಾಷಾಸಾಬ್, 36 ವರ್ಷ ರವರುಗಳು ಚೀಲಾಪುರ ಗ್ರಾಮ, ಹೊನ್ನಾಳಿ ತಾ. ರವರನ್ನು ವಶಕ್ಕೆ ಪಡೆದುಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಮೇಲ್ಕಂಡವರ ಆರೋಪಿತರ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 198/2023 ಕಲಂ 41 (ಡಿ), 102
ಸಿ.ಆರ್.ಪಿ.ಸಿ, ಕಲಂ 379 ಐಪಿಸಿ ಮತ್ತು ಕಲಂ 86, 87 ಕೆ.ಎಫ್ ಆಕ್ಟ್ ರೀತ್ಯ ಪ್ರಕರಣ ದಾಖಲಾಗಿರುತ್ತದೆ.
ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಗಟ್ಟೆ ಕ್ರಾಸ್ ಬಳಿ ಗಂಧದ ಮರದ ತುಂಡುಗಳನ್ನು ಕಳ್ಳತನ ಮಾಡಿಕೊಂಡು ಮಾರಾಟ ಮಾಡಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿತರನ್ನು ಬಂಧಿಸಿ ಪ್ರಕರಣವನ್ನು ಪತ್ತೆ ಮಾಡಿರುವ ಶ್ರೀ ಸಿದ್ದಪ್ಪ, ಪಿ.ಎಸ್.ಐ ಹೊನ್ನಾಳಿ ಪೊಲೀಸ್ ಠಾಣೆಯ ಹಾಗು ಸಿಬ್ಬಂದಿಯವರಾದ ಪರಶುರಾಮಪ್ಪ ಎ.ಎಸ್.ಐ, ದೊಡ್ಡಬಸಪ್ಪ, ಧರ್ಮಪ್ಪ, ಸಿದ್ದನಗೌಡ, ರಾಘವೇಂದ್ರ, ಮಂಜುನಾಥ, ಸುರೇಶನಾಯ್ಕ ರವರುಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ.ಅರುಣ್ ಕೆ ಐಪಿಎಸ್ ರವರು ದಾವಣಗೆರೆ ಜಿಲ್ಲೆ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.