ಜೆ.ಎಂ.ಎಫ್.ಸಿ. ಅಂಕೋಲಾ ನ್ಯಾಯಾಲಯದ ಸಿ.ಸಿ. ನಂಬರ್ 413/ 2008 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ ನೇದ್ದರ ಆರೋಪಿ ಅಬ್ದುಲ್ ಮುನೀರ್ ಉಬೇದ್ ಸಾ|| ಫರೀದಾ ಮಂಜಿಲ್, ಚೆನ್ಮಾಡ, ಜೆ.ಪಿ. ಚೆಂಬರಿಕಾ, ಚಂದ್ರಗಿರಿ, ಕೇರಳ ಈತನು ಕಳೆದ 2011 ನೇ ಸಾಲಿನಿಂದ ಮಾನ್ಯ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.
ಶ್ರೀ. ಶಿವಪ್ರಕಾಶ ದೇವರಾಜು ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ಉ.ಕ. ಕಾರವಾರ, ಶ್ರೀ .ಬದ್ರಿನಾಥ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ .ಅರವಿಂದ ಕಲಗುಜ್ಜಿ, ಪೊಲೀಸ್ ಉಪಾಧೀಕ್ಷಕರು, ಕಾರವಾರ ರವರ ಮಾರ್ಗದರ್ಶನದಲ್ಲಿ, ಶ್ರೀ. ಕೃಷ್ಣಾನಂದ ಜಿ. ನಾಯ್ಕ ಪೊಲೀಸ್ ನಿರೀಕ್ಷಕರು, ಅಂಕೋಲಾ ಪೊಲೀಸ್ ಠಾಣೆ ರವರ ನೇತೃತ್ವದದಲ್ಲಿ ಶ್ರೀ. ಇ.ಸಿ. ಸಂಪತ್ತು, ಪಿ.ಎಸ್.ಐ, ಶ್ರೀ. ಪ್ರೇಮನಗೌಡ ಪಾಟೀಲ ಪಿ.ಎಸ್.ಐ ಅಂಕೋಲಾ ಪೊಲೀಸ್ ಠಾಣೆ ರವರ ಹಾಗೂ ಸಿಬ್ಬಂದಿಯವರಾದ ಶ್ರೀ.ಮೋಹನದಾಸ ಶೆಣ್ವಿ, ಸಿ.ಹೆಚ್.ಸಿ. 236, ಶ್ರೀ. ಮಂಜುನಾಥ ಲಕ್ಮಾಪುರ, ಸಿ.ಪಿ.ಸಿ. 1094, ಶ್ರೀ. ಮನೋಜ. ಡಿ. ಸಿ.ಪಿ.ಸಿ. 1067 ಇವರುಗಳ ತಂಡವು ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಮುನೀರ್ ಉಬೇದ್ ಸಾ|| ಫರೀದಾ ಮಂಜಿಲ್, ಚೆನ್ಮಾಡ, ಜೆ.ಪಿ. ಚೆಂಬರಿಕಾ, ಚಂದ್ರಗಿರಿ, ಕೇರಳ ಈತನ ಬಗ್ಗೆ ಮಾಹಿತಿ ಸಂಗ್ರಹಿಸಿ, ಕೇರಳದ ಚೆನ್ಮಾಡಿನಲ್ಲಿ ಸದರಿಯವನನ್ನು ಪತ್ತೆ ಹಚ್ಚಿ, ದಸ್ತಗಿರಿ ಮಾಡಿ ದಿನಾಂಕ: 13-04-2021 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿತನಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಸದರಿ ಆರೋಪಿತನು ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್