ದಿನಾಂಕ 15.07.2022 ರಂದು ರಾತ್ರಿ ಸುಮಾರು 7.15 ಗಂಟೆಗೆ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ಸರಹದ್ದು ಪಚ್ಚಪ್ಪ ಸ್ಟ್ರೀಟ್ನಲ್ಲಿ ಅಪರಿಚಿತ ವ್ಯಕ್ತಿಗಳು ಸುಲೋಚನ ಎಂಬ 52 ವರ್ಷ ವಯಸ್ಸಿನ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆಯ ಕತ್ತಿನಲ್ಲಿದ್ದ 1,20,000/- ರೂ ಬೆಲೆ ಬಾಳುವ ಸುಮಾರು 40 ಗ್ರಾಂ ತೂಕದ ಬಂಗಾರದ ಮಾಂಗಲ್ಯದ ಸರವನ್ನು ಒಂದು ಮೊಬೈಲ್ ಪೋನ್ 15../- ನಗದು ಹಣವನ್ನು ದೋಚಿಕೊಂಡು ಹೋಗಿದ್ದು ಆಕೆಯ ಗಂಡ ಶ್ರೀ.ಶೇಗರ್ ಬಿನ್ ಲೇಟ್ ಗೋವಿಂದಸ್ವಾಮಿ ವಯಸ್ಸು ೫೮ ವರ್ಷ, ವಾಸ ನಂ ೩೫೯, ಪಚ್ಚಪ್ಪ ಸ್ಟ್ರೀಟ್ ಆಂಡ್ರಸನ್ಪೇಟೆ ರವರು ನೀಡಿದ್ದ ದೂರಿನ ಮೇರೆಗೆ ಲಾಭಕ್ಕಾಗಿ ಕೊಲೆ ರೀತ್ಯ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಡಾ||ಧರಣಿದೇವಿ ಮತ್ತು ಶ್ರೀ.ವಿ.ಎಲ್ ರಮೇಶ್ ಪೊಲೀಸ್ ಉಪಾಧೀಕ್ಷಕರು ಕೆ.ಜಿ.ಎಫ್ ರವರ ಮಾರ್ಗದರ್ಶನದಲ್ಲಿ ಶ್ರೀ.ಕುಮಾರಸ್ವಾಮಿ, ಸಿಪಿಐ ರಾಬರ್ಟ್ಸನ್ಪೇಟೆ ವೃತ್ತ, ವೆಂಕಟರಾಮಪ್ಪ ಸಿ.ಪಿ.ಐ ಉರಿಗಾಂ ವೃತ್ತ, ಹಾಗೂ ಶ್ರೀ.ವರುಣ್ಕುಮಾರ್.ಪಿ.ಐ, ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ. ರವರ ನೇತೃತ್ವದಲ್ಲಿ ಪಿ.ಎಸ್.ಐ ಆಂಡ್ರಸನ್ಪೇಟೆ ಪೊಲೀಸ್ ಠಾಣೆ ಮತ್ತು ಅಪರಾಧ ಪತ್ತೆದಳದ ಸಿಬ್ಬಂಧಿ ಒಳಗೊಂಡ ಮೂರು ತಂಡಗಳನ್ನು ರಚನೆಯಾಗಿತ್ತು.
ಕುಮಾರಸ್ವಾಮಿ.ಟಿ.ಆರ್, ಸಿಪಿಐ ರಾಬರ್ಟ್ಸನ್ಪೇಟೆ ವೃತ್ತ, ವೆಂಕಟರಾಮಪ್ಪ ಸಿ.ಪಿ.ಐ ಉರಿಗಾಂ ವೃತ್ತ, ಹಾಗೂ ಶ್ರೀ.ವರುಣ್ಕುಮಾರ್.ಪಿ.ಐ, ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ. ಶ್ರೀ.ಸುನಿಲ್ಕುಮಾರ್ ಪಿ.ಎಸ್.ಐ, ಆಂಡ್ರಸನ್ಪೇಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಯವರಾದ ಶ್ರೀ.ವೆಂಕಟೇಶಪ್ಪ. ಸಿಹೆಚ್ಸಿ ೧೦೬, ಶ್ರೀ.ಗಜೇಂದ್ರ ಸಿಹೆಚ್ಸಿ ೪೮, ಶ್ರೀ.ರಾಜೇಶ್, ಸಿಹೆಚ್ಸಿ ೩೮, ಶ್ರೀ.ಶಿವಯ್ಯ.ಟಿ ಸಿಹೆಚ್ಸಿ ೧೬, ಶ್ರೀ.ಮಹೇಂದ್ರಕುಮಾರ್, ಸಿಪಿಸಿ ೩೩ ಶ್ರೀ.ಚೇತನ್ಕುಮಾರ್, ಸಿಪಿಸಿ ೮೩, ಶ್ರೀ.ರಘು ಸಿಪಿಸಿ ೧೫, ಶ್ರೀ.ರಾಜೇಶ್, ಸಿಹೆಚ್ಸಿ ೩೮, ಶ್ರೀ.ಗೋಪಾಲಕೃಷ್ಣ ಸಿಹೆಚ್ಸಿ ೧೦೧, ಶ್ರೀ.ರವಿಕುಮಾರ್ ಸಿಪಿಸಿ ೬೪ ರವರು ದಿನಾಂಕ 25.07.2022 ರಂದು (೧)ಮಣಿಕಂಠ @ ಮಣಿಗಂಡ ಬಿನ್ ಲೇಟ್ ವೆಂಕಟೇಶ್, ವಯಸ್ಸು ೩೧ ವರ್ಷ, ಒಕ್ಕಲಿಗ, ಹೂವಿನ ಅಂಗಡಿಯಲ್ಲಿ ಕೆಲಸ ವಾಸ, ನಂ ೭೪೩, ೧ನೇ ಕ್ರಾಸ್, ಓಲ್ಡ್ ಸ್ವರ್ಣಕುಪ್ಪಂ, ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್. (೨) ರವಿಕಿರಣ್ @ ಕಿರಣ್, ಬಿನ್ ಲೇಟ್ ಮುರಳಿ, ವಯಸ್ಸು ೨೭ ವರ್ಷ, ಎಡಿಹೆಚ್ ಜನಾಂಗ, ದ್ವಿಚಕ್ರ ವಾಹನ ಮೆಕಾನಿಕ್ ಕೆಲಸ, ವಾಸ ನಂ ೪೪೯, ಓಲ್ಡ್ ಸ್ವರ್ಣಕುಪ್ಪಂ, ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್ ಎಂಬುವರನ್ನು ಪತ್ತೆಮಾಡಿದ್ದು ಅವರ ವಿಚಾರಣೆ ಆದಾರದ ಮೇರೆಗೆ ದಿನಾಂಕ 26.07.2022 ರಂದು (೧)ಆಕಾಶ್ ಬಿನ್ ಶಂಕರ್, ವಯಸ್ಸು ೨೦ ವರ್ಷ, ಎಡಿಹೆಚ್ ಜನಾಂಗ, ಹೂವಿನ ಅಂಗಡಿಯಲ್ಲಿ ಕೆಲಸ ವಾಸ, ಇರುದಯಪುರಂ ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್. (೨) ಸಂಜಯ್ ಬಿನ್ ಕುಮರೇಶ್, ವಯಸ್ಸು ೨೦ ವರ್ಷ, ಎಡಿಹೆಚ್ ಜನಾಂಗ, ಹೂವಿನ ಅಂಗಡಿಯಲ್ಲಿ ಕೆಲಸ ವಾಸ, ೧ನೇ ಸ್ಟ್ರೀಟ್ ಸಂಜಯಗಾಂಧಿನಗರ ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್. ಎಂಬುವರನ್ನು ದಸ್ತಗಿರಿ ಮಾಡಿ ಪ್ರಕರಣವನ್ನು ಪತ್ತೆಮಾಡಿ ಅವರಿಂದ ೪೦ ಗ್ರಾಂ ಬಂಗಾರದ ಮಾಂಗಲ್ಯದ ಸರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಕ್ಲಿಷ್ಟಕರವಾಗಿದ್ದ ಪ್ರಕರಣವನ್ನು 10 ದಿನಗಳಲ್ಲಿ ಪತ್ತೆಮಾಡಿ ಸಫಲರಾದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂಧಿಯವರನ್ನು ಪೊಲೀಸ್ ಅಧೀಕ್ಷಕರು ಕೆ.ಜಿ.ಎಫ್ ರವರು ಶ್ಲಾಘಿಸಿರುತ್ತಾರೆ.