ದಿನಾಂಕ 3.9.2021 ರಂದು ರಾತ್ರಿ ವೇಳೆ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ತೋಟದಲ್ಲಿದ್ದ ಸುಮಾರು 20 ಸಾವಿರ ರೂ. ಮೌಲ್ಯದ ಮರಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದು, ಈ ಬಗ್ಗೆ ಶನಿವಾರಸಂತೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಕೈಗೊಂಡ ಶನಿವಾರಸಂತೆ ಪೊಲೀಸರು ದಿನಾಂಕ 9-9-2021 ರಂದು 1)ಸೋಮಶೇಖರ,ಕೆಂಚಮ್ಮನ ಹೊಸಕೋಟೆ, ಹಾಸನ ಜಿಲ್ಲೆ, 2)ಪುಟ್ಟಸ್ವಾಮಿ, ಕಿರಿಕೊಡ್ಲಿ ಗ್ರಾಮ ಮತ್ತು 3) ಗೌತಮ್, ಹೊಸೂರು ಗ್ರಾಮ, ಹಾಸನ ಜಿಲ್ಲೆ ಎಂಬುವರನ್ನು ಪೊಲೀಸ್ ನಿರೀಕ್ಷಕರಾದ ಶ್ರೀ ಎಸ್. ಪರ ಶಿವಮೂರ್ತಿ ಮತ್ತು ತಂಡ ದಸ್ತಗಿರಿ ಮಾಡಿ, ಕಳುವಾದ ಮರ ನಾಟಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಟಾಟಾ ಸುಮೋ, ಒಂದು ಟ್ರಾಕ್ಟರ್ ಸೇರಿದಂತೆ ಸುಮಾರು ನಾಲ್ಕುವರೆ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ. ಈ ಕಾರ್ಯಚರಣೆಯಲ್ಲಿ ಎಎಸ್ಐ ಶಶಿಧರ್, ಸಿಬ್ಬಂದಿಗಳಾದ ಲೋಕೇಶ್, ಶಶಿಕುಮಾರ್, ಡಿಂಪಲ್, ಮುರಳಿ, ಷಣ್ಮುಖ ನಾಯಕ ಮತ್ತು ಧನಂಜಯರವರು ಭಾಗಿಯಾಗಿದ್ದು ಇವರ ಕಾರ್ಯವೈಖರಿಯನ್ನು ಪ್ರಶಂಸಿಸಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,